ಬಾಳಪುಟದಲ್ಲಿ ಬರೆಯದಿದ್ದರೂ ನಿನ್ನ ಹೆಸರು
ನನ್ನೊಂದಿಗೆ ಬೆರೆತೋಯ್ತು ನಿನ್ನ ಉಸಿರು
ನಿನ್ನ ನಗುವು
ಮರೆಯಲಾಗದು ಎಂದೂ ನನಗೆ
ನಿನ್ನ ಪ್ರೀತಿಯ ಮಾತು
ಸದಾ ಕೇಳಬೇಕೆನಿಸುವುದು ಎನಗೆ
ಅದು ಹೇಗೋ ಗೊತ್ತಿಲ್ಲ
ನೀ ನನ್ನ ಮನ ಸೇರಿದ ಸಮಯ
ಅದು ಸುದೀರ್ಘಮಯ
ನಿನ್ನ ಪ್ರೇಮಕ್ಕೆ
ನಿನಗೆ ಯಾವಾಗಲೋ ನೀಡುದೇ
ನನ್ನ ಈ ತನುಮನ
ಸದಾ ಎಂದೆಂದಿಗೂ ಕಾಯುವೆ
ಪಡೆಯಲು ನಿನ್ನ ಪರಿಶುದ್ದ ಮನಸಿನ ಪ್ರೀತಿಯನು
ಕನಸ್ಸಿರದ ಕಣ್ಣುಗಳೇಕೆ ?
ಬಾಗಿಲಿರದ ಮನೆಯೇಕೆ?
ನೀನಿರದ ಬಾಳೇಕೆ ?
ನೀ ಕೊಟ್ಟ ನೆನಪುಗಳೇ ಸಾಕು....!
ಮಧುವಿಲ್ಲದ ಹೂವೇಕೆ ?
ನೀನಿಲ್ಲದ ನಾನೇಕೆ ?
ಮೈ ಮರೆಸುವ ಮುತ್ತೇಕೆ ?
ಮತ್ತೆರಲು ನನಗೇನು ಬೇಕೆ ?
ನೀ ಕೊಡುವ ಸಿಹಿ ಮುತ್ತೇ ಸಾಕು...!
ಶಶಿ ಇರದೇ ಬಾನೇಕೆ ?
ಬಾನಿರದೇ ತಾರೆಗಳೆಕೆ ?
ನಿನ್ನ ನೆನಯದ ಕ್ಷಣವೇಕೆ ?
ನಿನ್ನೊಂದಿಗೆ ಕ್ಷಣ ಕಳೆಯಲು ನನಗೇನು ಬೇಕೆ ?
ನೀ ಕೊಡುವ ಪ್ರೀತಿಮುತ್ತುಗಳೇ ಸಾಕು...!
ಇಷ್ಟೆಲ್ಲ ನಿನ್ನನ್ನು ಇಷ್ಟಪಟ್ಟರೂ...ನಿನ್ನ ಪ್ರೀತಿಗೋಸ್ಕರ ಆಸೆ ಪಟ್ಟರೂ... ಒಮ್ಮೊಮ್ಮೆ ಭಯ ಆಗುತ್ತೆ ಗೊತ್ತಾ? ಏನೋ ತಳಮಳ...ನನ್ನ ಆಸೆ, ಕನಸುಗಳು ಸುಳ್ಳಾಗಿ ಬಿಡುತ್ತವೇನೋ ಅನ್ನೊ ಆತಂಕ...! ನೀನು ನನಗೆ, ಕೊನೆಗೊಂದು ದಿನ ನಾನು ನಿನ್ನ ಪ್ರೀತಿಸ್ಲೇ ಇಲ್ಲ ಅಂತ ಹೇಳಿ ಹೋಗಿಬಿಡುತ್ತಿಯೆನೋ ಅನ್ನೊ ಹೆದರಿಕೆ...! ನಂಗೊತ್ತಿಲ್ಲ, ನನ್ನ ಪ್ರೀತಿ ನನಗೆ ಬೇಕು. ನಿನ್ನ ಮನಸಿನಲ್ಲಿ ನನ್ನ ಬಿಟ್ಟು ಬೇರೆ ಯಾರಗೂ ಜಾಗ ಇರಬಾರದು. ಎಲ್ಲಾ ಜನ್ಮದಲ್ಲೂ ಕೂಡ ನೀನು ನನ್ನ ಮಾತ್ರ ಪ್ರೀತಿಸ್ಬೇಕು ಪ್ಲೀಸ್ ಈ ಸಲ ನನ್ನ ಹತ್ರ ಬಂದು ಕುತ್ಕೊಳ್ತಿಯಲ್ಲ... ಆಗ ನಂಗಷ್ಟೇ ಕೇಳೀಸೋ ಹಾಗೆ ನಂಗೊಂದು ಮಾತು ಹೇಳು ...'ನಂಗೆ ನೀನು ಮಾತ್ರ ಇಷ್ಟ' ಅಂತ....
ಅಳಿಸಿಹೋಗಿದ್ದ ಚಿತ್ರವನ್ನ ಹೊಸದಾಗಿ ಬರೆದು...
ಪುಟ್ಟ ಹೆಸರೊಂದನ್ನಿಟ್ಟು...
ಅದಕ್ಕೊಂದು ಕನಸಿನ ದೃಷ್ಟಿ ಬೊಟ್ಟು ಹಚ್ಚಿ...
ಬಣ್ಣ ತುಂಬುತ್ತಿರುವವನ ಬರುವಿಕೆಗಾಗಿ...
ಕಾದು ಕುಳಿತ ಹುಡುಗಿ..
ನಿನ್ನವಳು