Showing posts with label ಕಳೆದು ಹೋದ ನನ್ನ ಪ್ರೀತಿಯ...... Show all posts
Showing posts with label ಕಳೆದು ಹೋದ ನನ್ನ ಪ್ರೀತಿಯ...... Show all posts

Sunday, September 26, 2010

ಪ್ರೀತಿಯ ನೆನಪೊಂದೇ ಸಾಕೆನೆಗೆ......!

ಮನದಾಸೆಯ ಸುಮಕೆ,ಒಲವಿನ ನೀರೆರದವ..
ಅದು ಅರಳಿ ನಿಂತಾಗ ,ಮರೆಯಾಗಿ ಹೋದವ ..                                               
ಬದುಕೆಂಬ ದೋಣಿಗೆ ನಾವಿಕನಾಗಿ ಪ್ರೀತಿಯ ಮಳೆ ಕರೆದವ
ನೀರ ಸೆಳವು ಜೋರಾದಾಗ ,ಒಂಟಿಯಾಗಿ ಬಿಟ್ಟು ಹೋದವ ..
ನೀನೆ ಅಲ್ಲವೇ ನೀನೆ ಅಲ್ಲವೇ ?


ನೂರೆಂಟು ಆಸೆಗಳ ಮನದೆ ತುಂಬಿ
ಅದು ನನಸಾಗುವ ಕಾಲಕೆ ಕಾಣದಂತೆ ಮಾಯವಾದವ
ಮತ್ತೆ ಬರುವೆನೆಂಬ ಹುಸಿ ಭರವಸೆಯ ಮನದೆ ನೆಟ್ಟು
ನಿನ್ನದೇ ನೆನಪಲಿ ಕೊರಗುವಂತೆ ಮಾಡಿದ
ನೀನೆ ಅಲ್ಲವೇ ನೀನೆ ಅಲ್ಲವೇ ?



ಎಂದು ಬರುವೆಯೋ ನೀನು ,ಕಾದು ಕುಳಿತಿದ್ದೆ ನಾನು
ಬಂದಾಗ ಹೇಳದೆ ಹೋದೆ
ಇರದಿದ್ದರೂ ನೀ ನನ್ನ ಜೊತೆಗೆ
ಬರದಿದ್ದರು ಮನದ ಮನೆಗೆ
ಕಾಣಿಸಿ ಹೋಗಲಿಲ್ಲ ಒಮ್ಮೆ ನನಗೆ



ನಿನ್ನ ಪ್ರೀತಿಗಾಗಿ ನಾ ಮನಸಲ್ಲೆ ನೊಂದೆ
ನಿನ್ನ ದಾರಿಗೆ ತಡೆಯಲಿಲ್ಲ ,ತೊಡಕಾಗಿ ನಿಲ್ಲಲಿಲ್ಲ ನಾ
ಮನಸಲ್ಲೆ ನಿನ್ನ ಪೂಜಿಸಿ ..ಸುಮ್ಮನೆ ನೋಡದೆನು
ಮನದಲ್ಲೀ ಶುಭ ಕೋರಿ ಕಳಿಸಿದೇನು..