Showing posts with label ಪ್ರೇಮಯಾನವೇ ರಮ್ಯಕಥಾನಕ ಒಂದೇ ಜೀವಕೆ ಎರಡು ಮುಖ. Show all posts
Showing posts with label ಪ್ರೇಮಯಾನವೇ ರಮ್ಯಕಥಾನಕ ಒಂದೇ ಜೀವಕೆ ಎರಡು ಮುಖ. Show all posts

Monday, January 10, 2011

ಪ್ರೇಮವಿವಾಹದಿ ಇರುವ ಸುಖ ಬೇರಾವುದರಲಿ ಸಖ......

ಪ್ರೇಮವಿವಾಹದಿ ಇರುವ ಸುಖ
ಬೇರಾವುದರಲಿ ಸಖ
ಎರಡು ಜೀವಗಳು ಒಂದಾಗಿ
ಉಳಿದ ಬಾಯಿಗಳು ಬಂದಾಗಿ
ಪ್ರೇಮಯಾನವೇ ರಮ್ಯಕಥಾನಕ
ಒಂದೇ ಜೀವಕೆ ಎರಡು ಮುಖ...|




ಬೇರೆತಿರೆ ಜೀವ ಎಲ್ಲಿದೆ ಭೇದ
ಸತಿಪತಿ ಎರಡು ಸರಿಸಮವು
ಮಾತಿಗೆ ಮೊದಲೇ ಅರಿಯುದು ಮನವು
ಮುಕ್ತ ಮನೋಹರ ಸರಿಗಮವು
ಸಹನೆಯೇ ಸನಿಹ ಎಲ್ಲಿಹೇ ವಿರಹ
ನಿತ್ಯವಿನೂತನ ನಮ್ಮೊಲವು...|







ಕೋಪತಾಪಗಳು ಕರಗಿಹೆ ಬೇಗ
ಕಣ್ಣಲಿ ಗೆಳೆತನ ಹೊಳೆವಾಗ
ಓರೆಕೋರೆಗಳು ಸುಂದರವಿಗ ಮನಸಲಿ ಸೆಳೆತವು ಬೆಳೆವಾಗ
ಎಲ್ಲ ವಚನಗಳು ಈಡೇರಿಸಿಹೆ ಎಕವಚನದಲಿ ಅನುರಾಗ...|

ಪ್ರೇಮವಿವಾಹದಿ ಇರುವ ಸುಖ
ಬೇರಾವುದರಲಿ ಸಖ
ಎರಡು ಜೀವಗಳು ಒಂದಾಗಿ
ಉಳಿದ ಬಾಯಿಗಳು ಬಂದಾಗಿ
ಪ್ರೇಮಯಾನವೇ ರಮ್ಯಕಥಾನಕ
ಒಂದೇ ಜೀವಕೆ ಎರಡು ಮುಖ...|