Showing posts with label ಕಣ್ಣು ನನ್ನವಾದರು ಅಲ್ಲಿರುವ ಚಿತ್ರ ಮಾತ್ರ ನಿನ್ನದೆ. Show all posts
Showing posts with label ಕಣ್ಣು ನನ್ನವಾದರು ಅಲ್ಲಿರುವ ಚಿತ್ರ ಮಾತ್ರ ನಿನ್ನದೆ. Show all posts

Thursday, January 13, 2011

ಬಾ ಮುತ್ತಿಡು ನನ್ನ ಕಂಗಳಿಗೆ…!

ಮೇಘಗಳೇ ನೀವೆಷ್ಟು ಚಿಕ್ಕವರು
ನನ್ನ ಕಣ್ಣುಗಳ ಮುಂದೆ..
ನಾನು ಸುರಿಸಿದಷ್ಟು ಕಣ್ಣೀರು
ನೀವು ಸುರಿಸಲಿಲ್ಲ ನೀರು…!



ಎಷ್ಟು ವರ್ಷವಾಯಿತು ಇನಿಯ
ಶಬರಿಯಂತೆ ಕಾದಿದ್ದು ನಾನಲ್ಲ
ನನ್ನ ಕಣ್ಣುಗಳು….ಬಯಕೆಯಿಂದ
ನೀ ನನ್ನ ಮೈ ಮುಟ್ಟಲೇ ಬೇಡ
ಬಾ ಮುತ್ತಿಡು ನನ್ನ ಕಂಗಳಿಗೆ…!


ನಿನಗೆ ಗೊತ್ತು ನಿನಗಾಗಿ ಕಾದು ದುಃಖಿಸಿದ್ದು ನಾನು
ನಿನಗಾಗಿ..ದುಃಖಿಸಿದ್ದು ನಾನಾದರೂ
ಬೋರ್ಗರೆದು ಅತ್ತಿದ್ದು ಮಾತ್ರ ಕಣ್ಣುಗಳು
ಒಂದು ಸಲ ನನ್ನ ಕಂಗಳ ಮೇಲೆ ಮುತ್ತಿಡು..!
ಆಮೇಲೆ ಸತ್ತರು ಚಿಂತೆಯಿಲ್ಲ…ಕಣ್ಣುಗಳು ಮಾತ್ರ ನಿನ್ನವು…!


ಹೃದಯ ಸುಳ್ಳು ಹೇಳುವುದಿಲ್ಲವಂತೆ
 ಹಾಗಾದರೆ ನನ್ನ ಕಣ್ಣುಗಳು ಯಾವತ್ತು?
ನೀನಾಡುವ ಒಂದು ಮಾತಿಗೆ ಜಾತಕ
       ಪಕ್ಷಿಯ ಹಾಗೆ ಕಾತರಿಸಿದ್ದು ಕಿವಿಗಳಲ್ಲ ಕಣ್ಣುಗಳು….
ಅಲ್ಲಿರುವ ಬೆಳಕು ನೋಡಿಯು ನೀ ಅರಿಯಲಿಲ್ಲ…!


ನಾನಿಷ್ಟವಗಲಿಲ್ಲವ ಹೇಳು ಕಾರಣ ಬೇಕಿಲ್ಲ
ನೀನಿಲ್ಲದ ಬಾಳು ನನಗೆ ಹೊಸದಲ್ಲ..
ಅದು ನನ್ನ ಹಕ್ಕೆಂದು ಭಾವಿಸಿಯಾಗಿದೆ
ಆದರೆ ನನ್ನ ಕಣ್ಣುಗಳನ್ನ ಮಾತ್ರ ಜರೆಯಬೇಡ
ಒಟ್ಟು ಸಾವಿರ ಚಿತ್ರಗಳಿರಬೇಕಲ್ಲಿ
ಕಣ್ಣು ನನ್ನವಾದರು ಅಲ್ಲಿರುವ ಚಿತ್ರ ಮಾತ್ರ ನಿನ್ನದೆ…!