Showing posts with label ಮನಸಿನ ಪುಟದಲಿ ಅಳಿಸದ ನಿನ್ನ ಹೆಸರಿದೆ. Show all posts
Showing posts with label ಮನಸಿನ ಪುಟದಲಿ ಅಳಿಸದ ನಿನ್ನ ಹೆಸರಿದೆ. Show all posts

Monday, May 23, 2011

♥ಮೌನದ ಮರೆಯಲಿ ಮರೆಯದ ನೋವಿದೆ.... ಮನಸಿನ ಪುಟದಲಿ ಅಳಿಸದ ನಿನ್ನ ಹೆಸರಿದೆ ♥

ನನ್ನ ಎದೆಯಲಿ ಇಟ್ಟ ನಾಲ್ಕು ಹೆಜ್ಜೆಯ ಗುರುತು ಅಳಿಸಿಬಿಡು 
ನನ್ನ ಮನಸಿನ ನೆನಪಿನ ಅರಮನೆ ಚಾವಡಿಯಿಂದ ದೂರಸರಿ
ಮುಳ್ಳಿರದ ನಿನ್ನ ದಾರಿಯಲಿ ತಿರುಗದಲೇ ನಡೆದು ಬಿಡು
ನಿನ್ನ ಮನಸ್ಸಿನ ಅಂತಃಪುರದ ಬಾಗಿಲು ಬಡಿದ ಕೈಗಳ ತಪ್ಪನು 
ಕ್ಷಮಿಸಿ ಬಿಡು, ಕ್ಷಮಿಸಿ ಬಿಡು, ಕ್ಷಮಿಸಿ ಬಿಡು
ಅಂಗಳದ ನನ್ನ ಕಾಲ್ಗುರುತು ನಗು ನಗುತ ಅಳಿಸಿಬಿಡು.

ನಿನ್ನನ್ನು ಮರೆತು ಬಿಡಬೇಕು ಪದೇ ಪದೇ ನಿನ್ನ ನಿನ್ನನ್ನು ನೆನಪಿಸಿಕೊಳ್ಳಬಾರದು ಅಂತ ಅಂದ್ಕೋಳ್ತಿನಿ ಆದ್ರೆ ಅದು ನನ್ನಿಂದ ಸಾಧ್ಯಾವಾಗ್ತಾ ಇಲ್ಲ. ನೀನೇ ಕನಸಲ್ಲಿ ಬಂದು ಹೂ ಹಿಡಿದು ನನ್ನೆದುರು ನಿಂತಂತಿದೆ. ನೀ ಹೂವು ಹಿಡಿದು ನಿಂತಿದ್ದು ಭ್ರಮೆಯಾದರೂ, ಎಂದಾದರೊಂದು ದಿನ ಅದು ನಿಜವಾಗಬಹುದೆಂಬ ಹುಚ್ಚು ಮನ ಮತ್ತೆ ಭ್ರಮೆಯತ್ತ ಸಾಗುತ್ತಿದೆ   ಕ್ಷಣಕ್ಷಣಕ್ಕೂ ಮನ ನಿನ್ನ ನೆನದು ನಿನ್ನನೇ ಸೇರುತ್ತಿದೆ.

ಪ್ರೀತಿಯ ಅರಮನೆಯ ಪ್ರೇಮದ ಸಿಂಹಾಸದಲ್ಲಿ
ಅನ್ಯಳ ಸ್ಥಾಪನೆಯನ್ನು ಅರಿಯದೇ
ದೌರ್ಜನ್ಯಳಾಗಿ ಮೆಟ್ಟಿಬಂದು
ನಿನ್ನ ಹೃದಯ ಕದವ ತಟ್ಟಿದ್ದಕ್ಕೆ
                             ಕ್ಷಮಿಸೆನ್ನನು.......!

ಅತ್ತುಬಿಡು ಮನಸೇ
ಸಿಗದ ದುಃಖವನು ಅಳಿಸೇ. . 
ನೀ ಕಂಡ ಆ ಪ್ರೀತಿ ನಿದ್ದೆಯಿರದ ಕನಸು
ಬಿದ್ದೆಯಲ್ಲೋ ಬಾವಿಯಲ್ಲಿ,ನೀ ಬುದ್ದಿಯಿರದ ಮನಸು
ಮರೆಯದ ನೆನಪಲ್ಲೇ ದಿನಾ ಕೊರಗುವೆಯೇಕೆ?
ಮರೆತುಬಿಡು ಮನಸೇ,ಅವನು ಕೈಗೆ ಸಿಗದ ಮರೀಚಿಕೆ

♥ ನನ್ನ ಹೃದಯದಿ ಮೂಡಿದ ನಾಲ್ಕು ಹೆಜ್ಜೆಯ ಗುರುತ ಅಳಿಸಿಬಿಡು .......................... ಒಮ್ಮೆ ಅಳಿಸಿಬಿಡು ♥
                                                                                                                                                                                                  

ಜೀವನವೆಂಬ ಪಯಣದಲ್ಲಿ ಪ್ರೀತಿಯೆಂಬ ದೀಪವನ್ನು ಬೆಳಗಿಸಬೇಕಾದವನು ನಂದಿಸಿಲು ಪ್ರಯತ್ನಿಸುತ್ತಿರುವ ನಿನ್ನನ್ನು ನಾನು ಪ್ರೀತಿಸಿದ್ದು ನಾನು ನನ್ನ ಜೀವನದಲ್ಲಿ ಒಂದು ರಾತ್ರಿ ಕಂಡ ಕನಸು ಅಂತ ತಿಳ್ಕೊಂಡು ಮರೀಬೇಕು ಅಂತ ಎಷ್ಟು ಪ್ರಯತ್ನಿಸಿದರೂ ಅದು ಸಾಧ್ಯವಾಗ್ತಾ ಇಲ್ಲ. ಇನ್ನು ಮುಂದೆ ಎಂದೆಂದಿಗೂ ನಿನ್ನ ನೋಡಲು, ಮಾತನಾಡಲು ಹಂಬಲಿಸಬಾರದು ನನ್ನ ಮುಂದಿನ ಸುಂದರ ನಾಳೆಗಳಲ್ಲಿ ನಿನ್ನ ಬಗ್ಗೆ ಕನಸ್ಸು ಕಟ್ಟಿಕೊಳ್ಳಬಾರದಂತ ಎಷ್ಟು ಎಣಿಸಿಕೊಂಡರೂ ನೀನು ನನ್ನೊಂದಿಗೆ ಮಾತನಾಡುತಿದ್ದರೆ, ನಿನ್ನ ನಗುಮುಖ ನೆನಪಾದೊಡನೆ ನಾನು ನಿನ್ನ ನಂಬಿ ಬಿಡ್ತೀನಿ ಕಣೋ . ನಿನಗಾಗಿ ನನ್ನ ಹೃದಯದ ಪ್ರತಿಯೊಂದು ಬಡಿತ ಕ್ಷಣಕ್ಷಣಕೂ ಮಿಡಿಯುತ್ತಿದೆ. ತಂಗಾಳಿಯಂತೆ ನನ್ನ ಬಾಳಿಗೆ ಪ್ರೀತಿ ಕೊಡಬೇಕಾದವನು ಕೆಲಮೊಮ್ಮೆ ಬಿರುಗಾಳಿಯಂತೆ ಬೀಸುವ ಹುಡುಗ ನಿಜವಾಗಿ ಇಲ್ಲಿ ಕೇಳು........


ಮೌನದ ಮರೆಯಲಿ ಮರೆಯದ ನೋವಿದೆ
ಮನಸಿನ ಪುಟದಲಿ ಅಳಿಸದ ನಿನ್ನ ಹೆಸರಿದೆ