Showing posts with label ನನ್ನ ಹೃದಯದ ಪ್ರತಿ ಉಸಿರು ನಿನ್ನ ಹೆಸರು. Show all posts
Showing posts with label ನನ್ನ ಹೃದಯದ ಪ್ರತಿ ಉಸಿರು ನಿನ್ನ ಹೆಸರು. Show all posts

Saturday, December 11, 2010

ಪ್ರೀತಿ ಎಂದರೆ ಏನೆಂದು ಅರಿಯುವುದಕ್ಕೆ ಮೊದಲೇ ನಾ ನಿನ್ನ ಪ್ರೀತಿಸಿದೆ ಕಣೋ..

ನಿನಗೆ ತಿಳಿಯಲಿಲ್ಲ
ಅಂದು ಕಣ್ಣಲ್ಲೆ ಸಂದೇಶ ಕಳುಹಿಸಿದೆ

ನಿನಗೆ ತಿಳಿಯಲಿಲ್ಲ,
ಅಂದು ಮೌನದಲ್ಲಿ ಮಾತಾಡಿದೆ

ನಿನಗೆ ತಿಳಿಯಲಿಲ್ಲ,
ಅಂದು ದೂರದಿಂದ ಹತ್ತಿರ ಬಂದೆ

ನಿನಗೆ ತಿಳಿಯಲಿಲ್ಲ,
ಅಂದು ಭಾವನೆಯ ಬಾಣದಲ್ಲಿ ಕೆಣಕಿದೆ


ನಿನಗೆ ತಿಳಿಯಲಿಲ್ಲ,
ಅಂದು ಜೊತೆಯಲ್ಲಿ ಇದ್ದು ಹರಟೆ ಹೊಡೆದೆ

ನಿನಗೆ ತಿಳಿಯಲಿಲ್ಲ,
ಅಂದು ನಿನ್ನ ಭಾವನೆಗಳನ್ನೆಲ್ಲಾ ಕೆಣಕಿದ್ದೇ

ನಿನಗೆ ತಿಳಿಯಲಿಲ್ಲ,
ಅಂದು ನಿನ್ನ ಕೈ ಜೊತೆ ನನ್ನ ಕೈ ಸೇರಿಸಿದ್ದೆ

ನಿನಗೆ ತಿಳಿಯಲಿಲ್ಲ,
ಅಂದು ಉಸಿರು ಹಿಡಿದು ಹೇಳಿದೆ "ನೀನೆಂದ್ರೆ ನನಗಿಷ್ಟ" ಅಂತ


ಪ್ರೀತಿ ಎಂದರೆ ಏನೆಂದು ಅರಿಯುವುದಕ್ಕೆ ಮೊದಲೇ ನಾ ನಿನ್ನ ಪ್ರೀತಿಸಿದೆ

ಮನದ ಭಾವನೆಗಳನ್ನು ನಿನ್ನಲ್ಲಿ ಹೇಳಿಕೊಳ್ಳಲು ಚಡಪಡಿಸಿದೆ ,

ನಿನ್ನ ಜೊತೆ ನಾ ಕಳೆದ ಪ್ರತಿ ಕ್ಷಣವೂ ಅಮೂಲ್ಯವಾದುದು

ಹೇಗೆ ಮರೆಯಲಿ ಆ ಸುಂದರ ಕ್ಷಣಗಳನ್ನು????

ಇಂದಿಗೂ ನಿನ್ನ ನಗುಮೊಗಕ್ಕಾಗಿ ನನ್ನ ಮನ ಹಂಬಲಿಸುತ್ತದೆ

ಇಷ್ಟು ವರ್ಷಗಳ ನಂತರವೂ ನಿನಗಾಗಿ ನನ್ನ ಮನ ತುಡಿಯುತ್ತದೆ

ಹೇಗೆ ಅರ್ಥಯ್ಸಲಿ ನಿನಗೆ ನನ್ನೆದೆಯ ಈ ಪ್ರೀತಿಯನ್ನು.????

ಹೃದಯದಲ್ಲಿ ಆಸೆಯ ಜ್ಯೋತಿಯನ್ನು ಹಿಡಿದು,

ಕಂಗಳಲ್ಲಿ ನಿರೀಕ್ಷೆಯ ಪ್ರಣತಿಯನ್ನು ಹಚ್ಚಿ ,

ಹುಚ್ಚು ಭರವಸೆಯಲ್ಲಿ ನೀ ಬರುವ ದಾರಿ ಕಾಯುತಿದ್ದೆ ..



ಆದರೂ ನಿನಗೆ ನಾ ನಿನ್ನ ಪ್ರೀತಿಸುವೆ ಎಂದು ತಿಳಿಯಲಿಲ್ಲವೋ ತಿಳಿದರೂ ತಿಳಿಯದಂತೆ ನಟಿಸಿದೆಯೋ??????