Wednesday, December 7, 2011

♥ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ♥

ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ
ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ
ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ
ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ

ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ

ಮನಸಿನ ಭಾವನೆಗಳನ್ನು ಈ ಬ್ಲಾಗಲ್ಲದೇ ನಿನಗೆ ತಿಳಿಸುವುದಾದರೂ ಹೇಗಿತ್ತು? ಎಷ್ಟೊಂದು ಭಾವಗಳು ಎದೆಯಲ್ಲಿ ಕುದಿಯುತ್ತಿದ್ದವು? ನಿನ್ನ ಒಂದು ಮುಖದರ್ಶನಕ್ಕಾಗಿ ಜನುಮವಿಡೀ ಕಾಯುವ ಶಿಕ್ಷೆ ವಿಧಿಸಿದರೂ ಪರವಾಗಿಲ್ಲ ಅನ್ನುವಷ್ಟು ಎಲ್ಲ ಕಳಕೊಂಡ ಹುಚ್ಚಿಯಾಗಿದ್ದೇನೆ. ಆಗಷ್ಟೇ ಖಾರ ತಿಂದವ ನೀರು ಬಯಸುವಷ್ಟು ತೀವ್ರವಾಗಿ ನಿನ್ನ ನೋಡಬೇಕು, ಒಮ್ಮೆ ನಿನ್ನ ಮಡಿಲು ಸೇರಬೇಕು, ನನ್ನೆಲ್ಲಾ ವಿರಹ, ನೋವುಗಳು ನಿನ್ನ ಮಡಿಲಿನಲ್ಲಿ ಕೊನೆಯುಸಿರೆಳೆವುದನ್ನು ಕಾಣಬೇಕು ಅನ್ನುವ ಭಾವ. ಆದರೆ ಒದ್ದಾಡುವಂತೆ ಮಾಡುವ ಈ ಸಾವಿರ ಸಾವಿರ ಮೈಲುಗಳ ದೂರ. ಒಮ್ಮೆ ನಿನ್ನ ನೋಡಬೇಕು, ಎಲ್ಲೋ ಮೂಲೆಯಲ್ಲಿ ನಿಂತು ಕದ್ದಾದರೂ ಸರಿ. ಮತ್ತೆ ಒಂಚೂರು ಬಾಳುವ ಆಸೆ ಬದುಕೀತು ಅನ್ನಿಸಿದೆ. 
ಅಳೋದಕ್ಕೆ,ನಗೋದಕ್ಕೆ,ಕೋಪಿಸಿಕೊಳ್ಳೋದಕ್ಕೆ,ಮುನಿಸಿಕೊಳ್ಳೋದಕ್ಕೆ,ಮುದ್ದುಮಾಡೋಕೆ ಎದೆಗೊರಗಿಕೊಂಡು ಬಿಕ್ಕಳಿಸೋಕೆ ನನಗೆ ನೀನು ಬೇಕು.....ಇದುವರೆಗು ನಾನು ನಿನ್ನ ಜೊತೆಯೇ ಹೆಚ್ಚು ಜಗಳವಾಡಿದ್ದೀನಿ.......ಹೆಚ್ಚು ಮುನಿಸಿಕೊಂಡಿದ್ದೀನಿ, ಹೆಚ್ಚು ಮುದ್ದುಮಾಡಿದ್ದೀನಿ, ಹೆಚ್ಚು ಕಣ್ಣೀರಾಗಿದ್ದೀನಿ, ಅದಕ್ಕಿಂತಲೂ ಹೆಚ್ಚು ನಿನ್ನನ್ನ ಪ್ರೀತಿಸಿದ್ದೀನಿ ...

ನನ್ನಿಂದಲೂ ಸಹ ತಪ್ಪುಗಳಾಗಿರಬಹುದು ನನ್ನಿಂದ ಎನೇ ತಪ್ಪಾಗಿದ್ದರೂ, ಅದಕ್ಕೆ ಸಾವಿರ ಸಲ ತಪ್ಪಾಯಿತು ಕ್ಷಮಿಸಿಬಿಡು ಅಂದುಕೊಂಡು ನಾನು ನಿನ್ನ ಮುಂದೆ ಮಂಡಿಯೂರಿ ಕುಳಿತು ಕ್ಷಮೆಯ ಬಿಕ್ಷೆ ಬೇಡಲು ಸಿದ್ಧಳಾಗಿದ್ದೀನಿ. ಮತ್ತೆ ನಮ್ಮ ಹಳೆಯ ದಿನಗಳನ್ನ ಮರಳಿ ಪಡಿಯೋಣ, ಒಂದಷ್ಟು ಜಗಳವಾಡೋಣ, ಮುನಿಸಿಕೊಳ್ಳೋಣ, ಮತ್ತೆ ಮಾತು ಬಿಡೋಣ, ಮತ್ತೆ ರಾಜಿಯಾಗೋಣ, ಮತ್ತೆ ಜಗಳ ಮತ್ತೆ ರಾಜಿ, ಹಾಗೆ ಇಬ್ಬರೂ ಮತ್ತಷ್ಟು ಪ್ರೀತಿಸಿಕೊಳ್ಳೋಣ.

ನನಗೂಂದು ಹೃದಯ ಬೇಕು ನನ್ನೆದೆಯ ಬಗೆದು ಪ್ರೇಮವೆಲ್ಲವ ತೆಗೆದು ನಿವೇದಿಸಬೇಕು,ನನಗೂಂದು ಹೃದಯಬೇಕು ಇನಿಯಾ! ಅದು ನೀನಾಗಬೇಕು, ನನಗೂಂದು ಹೃದಯಬೇಕು ಮಾರ್ದವಗೂಳ್ಳುವ ಸುಂದರ ಜೀವನಸಾರ ಬೀರುವ ಪ್ರೇಮರೂಪವಾಗಬೇಕು, ನನಗೂಂದು ಹೃದಯಬೇಕು! ಅದು ನನಗಾಗಿ ಮಿಡಿಯಬೇಕು, ನನಗೂಂದು ಹೃದಯಬೇಕು ನಾ ಮೆದ್ದ ಜೀವನದ ಸದ್ದು ಆಲಿಸಲು ಕದ್ದು ಕದ್ದು ಮಾತಾಡಲು ಮೌನವ ಮಾತಿನಲ್ಲಿ ಹಂಚಿಕೊಳ್ಳಲು ಹೃದಯವಂತ ಹೃದಯ ಬೇಕು.

ನನಗೂಂದು ಹೃದಯಬೇಕು ! ನೀ ನನ್ನ ಪ್ರೀತಿಸಬೇಕು, ಕಥನವಾಗದೆ ಕಾವ್ಯವಾಗುವ ಬೇವು ತಿಂದರೂ ಬೆಲ್ಲದಂತೆ ನಗುವ ಒಂದು ಜೀವಬೇಕು ನಮ್ಮ ಪ್ರೀತಿ ಅಮರವಾಗಬೇಕು, ನನಗೊಂದು ಹೃದಯಬೇಕು ! ನಾ ನಿನ್ನ ಪ್ರೀತಿಸಬೇಕು, ನನಗೊಂದು ಹೃದಯಬೇಕು ಶಶಿಯಂತೆ ಹಿತಸ್ಪರ್ಶಿ ನೀಡಬೇಕು ಧಾವಂತದಲ್ಲೂ ಧೃತಿಗೆಡದೆ ನನಗಾಗಿ ಮಿಡಿವ ಮೊಲ್ಲೆ ಹೂವಂತ ಹೃದಯಬೇಕು, ನನಗೊಂದು ಹೃದಯಬೇಕು ! ನಾನಲ್ಲಿ ನೆಲಸಬೇಕು, ನನಗೊಂದು ಹೃದಯಬೇಕು ಸರಳ ವಿರಳ ಕಪಟರಹಿತ ಮುಗ್ಧಮನ ಬೇಕು ಎಲ್ಲವನ್ನು ಗೆದ್ದು ಬೇಡದ್ದನ್ನು ಒದ್ದು ಪ್ರೀತಿಗಾಗಿ ಜೀವ ಕಾಯಬೇಕು ~ ~ ನನಗೊಂದು ಹೃದಯಬೇಕು ! ನಿನ್ನ ಪ್ರೀತಿ ಸಿಕ್ಕ ಮೇಲೆ ನಾ ಸಾಯಬೇಕು!!

2 comments: