ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ
ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ
ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ
ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ
ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ

ಅಳೋದಕ್ಕೆ,ನಗೋದಕ್ಕೆ,ಕೋಪಿಸಿಕೊಳ್ಳೋದಕ್ಕೆ,ಮುನಿಸಿಕೊಳ್ಳೋದಕ್ಕೆ,ಮುದ್ದುಮಾಡೋಕೆ ಎದೆಗೊರಗಿಕೊಂಡು ಬಿಕ್ಕಳಿಸೋಕೆ ನನಗೆ ನೀನು ಬೇಕು.....ಇದುವರೆಗು ನಾನು ನಿನ್ನ ಜೊತೆಯೇ ಹೆಚ್ಚು ಜಗಳವಾಡಿದ್ದೀನಿ.......ಹೆಚ್ಚು ಮುನಿಸಿಕೊಂಡಿದ್ದೀನಿ, ಹೆಚ್ಚು ಮುದ್ದುಮಾಡಿದ್ದೀನಿ, ಹೆಚ್ಚು ಕಣ್ಣೀರಾಗಿದ್ದೀನಿ, ಅದಕ್ಕಿಂತಲೂ ಹೆಚ್ಚು ನಿನ್ನನ್ನ ಪ್ರೀತಿಸಿದ್ದೀನಿ ...

ನನಗೂಂದು ಹೃದಯ ಬೇಕು ನನ್ನೆದೆಯ ಬಗೆದು ಪ್ರೇಮವೆಲ್ಲವ ತೆಗೆದು ನಿವೇದಿಸಬೇಕು,ನನಗೂಂದು ಹೃದಯಬೇಕು ಇನಿಯಾ! ಅದು ನೀನಾಗಬೇಕು, ನನಗೂಂದು ಹೃದಯಬೇಕು ಮಾರ್ದವಗೂಳ್ಳುವ ಸುಂದರ ಜೀವನಸಾರ ಬೀರುವ ಪ್ರೇಮರೂಪವಾಗಬೇಕು, ನನಗೂಂದು ಹೃದಯಬೇಕು! ಅದು ನನಗಾಗಿ ಮಿಡಿಯಬೇಕು, ನನಗೂಂದು ಹೃದಯಬೇಕು ನಾ ಮೆದ್ದ ಜೀವನದ ಸದ್ದು ಆಲಿಸಲು ಕದ್ದು ಕದ್ದು ಮಾತಾಡಲು ಮೌನವ ಮಾತಿನಲ್ಲಿ ಹಂಚಿಕೊಳ್ಳಲು ಹೃದಯವಂತ ಹೃದಯ ಬೇಕು.
ನನಗೂಂದು ಹೃದಯಬೇಕು ! ನೀ ನನ್ನ ಪ್ರೀತಿಸಬೇಕು, ಕಥನವಾಗದೆ ಕಾವ್ಯವಾಗುವ ಬೇವು ತಿಂದರೂ ಬೆಲ್ಲದಂತೆ ನಗುವ ಒಂದು ಜೀವಬೇಕು ನಮ್ಮ ಪ್ರೀತಿ ಅಮರವಾಗಬೇಕು, ನನಗೊಂದು ಹೃದಯಬೇಕು ! ನಾ ನಿನ್ನ ಪ್ರೀತಿಸಬೇಕು, ನನಗೊಂದು ಹೃದಯಬೇಕು ಶಶಿಯಂತೆ ಹಿತಸ್ಪರ್ಶಿ ನೀಡಬೇಕು ಧಾವಂತದಲ್ಲೂ ಧೃತಿಗೆಡದೆ ನನಗಾಗಿ ಮಿಡಿವ ಮೊಲ್ಲೆ ಹೂವಂತ ಹೃದಯಬೇಕು, ನನಗೊಂದು ಹೃದಯಬೇಕು ! ನಾನಲ್ಲಿ ನೆಲಸಬೇಕು, ನನಗೊಂದು ಹೃದಯಬೇಕು ಸರಳ ವಿರಳ ಕಪಟರಹಿತ ಮುಗ್ಧಮನ ಬೇಕು ಎಲ್ಲವನ್ನು ಗೆದ್ದು ಬೇಡದ್ದನ್ನು ಒದ್ದು ಪ್ರೀತಿಗಾಗಿ ಜೀವ ಕಾಯಬೇಕು ~ ~ ನನಗೊಂದು ಹೃದಯಬೇಕು ! ನಿನ್ನ ಪ್ರೀತಿ ಸಿಕ್ಕ ಮೇಲೆ ನಾ ಸಾಯಬೇಕು!!

nice one, tumba emotional aagi ansatte! chennaagi bareyitteeri neevu. :)
ReplyDeletesuperb.....
ReplyDelete