Tuesday, February 1, 2011

♥♥♥ ಸ್ವರ್ಗದಲ್ಲಿ ಮದುವೆಗಳಿಲ್ಲ ಭೂಮಿಯಲ್ಲಿದೆ ಭೂಮಿಯಾಚೆ ಎಲ್ಲರ ಪ್ರೇಮ ಸ್ವರ್ಗದಲ್ಲಿದೆ ♥♥♥

ಬಾಳಪುಟದಲ್ಲಿ ಬರೆಯದಿದ್ದರೂ ನಿನ್ನ ಹೆಸರು
ನನ್ನೊಂದಿಗೆ ಬೆರೆತೋಯ್ತು ನಿನ್ನ ಉಸಿರು
ನಿನ್ನ ನಗುವು
ಮರೆಯಲಾಗದು ಎಂದೂ ನನಗೆ
ನಿನ್ನ ಪ್ರೀತಿಯ ಮಾತು
ಸದಾ ಕೇಳಬೇಕೆನಿಸುವುದು ಎನಗೆ
ಅದು ಹೇಗೋ ಗೊತ್ತಿಲ್ಲ 
ನೀ ನನ್ನ ಮನ ಸೇರಿದ ಸಮಯ
ಅದು ಸುದೀರ್ಘಮಯ
ನಿನ್ನ ಪ್ರೇಮಕ್ಕೆ
ನಿನಗೆ ಯಾವಾಗಲೋ ನೀಡುದೇ
ನನ್ನ ಈ ತನುಮನ
ಸದಾ ಎಂದೆಂದಿಗೂ ಕಾಯುವೆ
ಪಡೆಯಲು ನಿನ್ನ ಪರಿಶುದ್ದ ಮನಸಿನ ಪ್ರೀತಿಯನು

ನೀನು ನನಗೆ ನೆನಪಾದ ಒಂದು ಸುಂದರ ಸಂಜೆ. ನಾನು ನಿನ್ನ ನೆನಪುಗಳ ಮೊಗ್ಗು ಹೊದ್ದುಕೊಂಡು ನಿನ್ನನ್ನೇ ಧ್ಯಾನಿಸುತ್ತಿದ್ದಾಗ ನನ್ನೊಳಗೆ ಸದ್ಧಿಲ್ಲದೆ ಮೂಡಿದ ಆಸೆ ನಿನ್ನ ಜೊತೆ ಒಂದು ದಿನ ಪೂರ್ತಿಯಾಗಿ ಕಳೆಯಬೇಕು. ಜನ ನಗ್ತಾರೆ ಗೊತ್ತು, ಏನ್ ಹುಡುಗೀನಪ್ಪ ಅನ್ಕೋತಾರೆ ಅಂತಾನೂ ಗೊತ್ತು, ತುಂಬಾ ಫಾಸ್ಟ್ ಇದ್ದಾಳಪ್ಪ ಹುಡುಗಿ ಅಂತಾನೂ ಹೇಳ್ತಾರೆ, ಜನರ ಮಾತು ಬಿಡು ಅವ್ರಿಗೆ ನಮ್ಮಿಬ್ಬರ ಬಗ್ಗೆ ಏನೂ ಗೊತ್ತಿಲ್ಲ ಆದ್ರೆ ನೀನು ಏನೂ ಅಂದ್ಕೊಳ್ಳಲ್ಲ ಅಂತ ನಂಗೊತ್ತು. ಯಾಕೆಂದ್ರೆ ನಮ್ಮಿಬ್ಬರ ಪ್ರೀತಿ ಗಂಗೆಯಷ್ಟು ಪವಿತ್ರ, ಹಾಲಿನಷ್ಟು ತಿಳಿಯಾಗಿರುವಾಗ ನಮ್ಮಿಂದ ನಮ್ ಪ್ರೀತಿಗೆ ಯಾವ ಅಪಚಾರನೂ ಅಗಲ್ಲ, ಪ್ರೀತಿ ಎಂದರೆ ಮೋಹ ಮಾತ್ರವಲ್ಲ ಅನ್ನೋದು ನಮ್ಗೆ ಗೊತ್ತಲ್ವಾ? ನಾನ್ ನಿನ್ ಜೊತೆ ತುಂಬಾ ಮಾತಾಡ್ಬೇಕು, ಪ್ಲಿಸ್ ಯಾರೂ ಇಲ್ಲದ ಜಾಗಕ್ಕೆ ನನ್ನ ಕರೆದುಕೊಂಡು ಹೋಗು, ನಾನೆಷ್ಟು ಪ್ರೀತಿಸ್ತೀನಿ ಅಂತ ನಿನ್ನಲ್ಲಿ ಹೇಳ್ಕೊಳ್ಳ್ಬೇಕು,  ನಿನ್ನೊಂದಿಗೆ ಜೊತೆಯಾಗಿ ಹೆಜ್ಜೆಹಾಕುತ್ತ ತುಂಬಾ ದೂರ ನಡೆಯಬೇಕು ನಿನ್ನೊಂದಿಗೆ ಹೆಜ್ಜೆ ಹಾಜಿ ನಡೆಯುವ ಸೌಭಾಗ್ಯಕ್ಕಿಂತ ಬೇರೆ ಏನಿದೆ ನನಗೆ? ಬೇಕಾದರೆ ಒಂದೂ ಮಾತಿಲ್ಲದೆ ಸಂಜೆಯವರೆಗೂ ನಿನ್ನ ಕೈ ಹಿಡಿದುಕೊಂಡು ನಡೆಯಬಲ್ಲೆ. ಅಲ್ಲಿ ನಿನ್ನ ಪ್ರೀತಿಮಾತು, ನನ್ನ ಹುಸಿಮುನಿಸು ಎಲ್ಲ ಇದ್ದರೆ ಅದೆಷ್ಟು ಚೆನ್ನ ಅಲ್ವಾ? ನಮ್ಮ ಪ್ರೀತಿಗೆ ನನ್ನವನಿಂದ ಯಾವ ಅಪಚಾರವೂ ಆಗೊಲ್ಲ ಅನ್ನುವ ನಂಬಿಕೆ ನನಗಿದೆ. ಆದ್ರೆ… ಆದ್ರೆ… ಆದ್ರೆ.. ನಿನ್ನ ಜೊತೆಯಲಿ  ನೀನು ಪ್ರೀತಿಸುವ ಒಂದು ಹುಡುಗಿಯಿದ್ರು ನೋಡಿಯೂ ಮುಟ್ಟಲಾಗದೆ, ಮುದ್ದಿಸಲಾಗದೆ ಇರೋದನ್ನ ನಾನು ನೋಡ್ಬೇಕು ಅನ್ನಿಸ್ತಿದೆ. ಅಯ್ಯೋ ಪಾಪ ಅನ್ನಿಸಿದ್ರೆ ಎರಡೇ ಎರಡು ಪುಟಾಣಿ ಮುತ್ತುಗಳು ಅದು ಹಣೆಗೆ ಮತ್ತು ಕಣ್ಣಿಗೆ ಮಾತ್ರ. 

ಕನಸ್ಸಿರದ ಕಣ್ಣುಗಳೇಕೆ ?
ಬಾಗಿಲಿರದ ಮನೆಯೇಕೆ?
ನೀನಿರದ ಬಾಳೇಕೆ ?
ನೀ ಕೊಟ್ಟ ನೆನಪುಗಳೇ ಸಾಕು....!

ಮಧುವಿಲ್ಲದ ಹೂವೇಕೆ ?
ನೀನಿಲ್ಲದ ನಾನೇಕೆ ?
ಮೈ ಮರೆಸುವ ಮುತ್ತೇಕೆ ?
ಮತ್ತೆರಲು ನನಗೇನು ಬೇಕೆ ?
ನೀ ಕೊಡುವ ಸಿಹಿ ಮುತ್ತೇ ಸಾಕು...!

ಶಶಿ ಇರದೇ ಬಾನೇಕೆ ?
ಬಾನಿರದೇ ತಾರೆಗಳೆಕೆ ?
ನಿನ್ನ ನೆನಯದ ಕ್ಷಣವೇಕೆ ?
ನಿನ್ನೊಂದಿಗೆ ಕ್ಷಣ ಕಳೆಯಲು ನನಗೇನು ಬೇಕೆ ?
ನೀ ಕೊಡುವ ಪ್ರೀತಿಮುತ್ತುಗಳೇ ಸಾಕು...!

ಇಷ್ಟೆಲ್ಲ ನಿನ್ನನ್ನು ಇಷ್ಟಪಟ್ಟರೂ...ನಿನ್ನ ಪ್ರೀತಿಗೋಸ್ಕರ ಆಸೆ ಪಟ್ಟರೂ... ಒಮ್ಮೊಮ್ಮೆ ಭಯ ಆಗುತ್ತೆ ಗೊತ್ತಾ? ಏನೋ ತಳಮಳ...ನನ್ನ ಆಸೆ, ಕನಸುಗಳು ಸುಳ್ಳಾಗಿ ಬಿಡುತ್ತವೇನೋ ಅನ್ನೊ ಆತಂಕ...! ನೀನು ನನಗೆ, ಕೊನೆಗೊಂದು ದಿನ ನಾನು ನಿನ್ನ ಪ್ರೀತಿಸ್ಲೇ ಇಲ್ಲ ಅಂತ ಹೇಳಿ ಹೋಗಿಬಿಡುತ್ತಿಯೆನೋ ಅನ್ನೊ ಹೆದರಿಕೆ...! ನಂಗೊತ್ತಿಲ್ಲ, ನನ್ನ ಪ್ರೀತಿ ನನಗೆ ಬೇಕು. ನಿನ್ನ  ಮನಸಿನಲ್ಲಿ ನನ್ನ ಬಿಟ್ಟು ಬೇರೆ ಯಾರಗೂ ಜಾಗ ಇರಬಾರದು. ಎಲ್ಲಾ ಜನ್ಮದಲ್ಲೂ ಕೂಡ ನೀನು ನನ್ನ ಮಾತ್ರ ಪ್ರೀತಿಸ್ಬೇಕು ಪ್ಲೀಸ್ ಈ ಸಲ ನನ್ನ ಹತ್ರ ಬಂದು ಕುತ್ಕೊಳ್ತಿಯಲ್ಲ... ಆಗ ನಂಗಷ್ಟೇ ಕೇಳೀಸೋ ಹಾಗೆ ನಂಗೊಂದು ಮಾತು ಹೇಳು ...'ನಂಗೆ ನೀನು ಮಾತ್ರ ಇಷ್ಟ' ಅಂತ....
ಅಳಿಸಿಹೋಗಿದ್ದ ಚಿತ್ರವನ್ನ ಹೊಸದಾಗಿ ಬರೆದು...

ಪುಟ್ಟ ಹೆಸರೊಂದನ್ನಿಟ್ಟು...

ಅದಕ್ಕೊಂದು ಕನಸಿನ ದೃಷ್ಟಿ ಬೊಟ್ಟು ಹಚ್ಚಿ...

ಬಣ್ಣ ತುಂಬುತ್ತಿರುವವನ ಬರುವಿಕೆಗಾಗಿ...

ಕಾದು ಕುಳಿತ ಹುಡುಗಿ..
                                                                                                                       ನಿನ್ನವಳು

5 comments:

 1. ಅಳಿಸಿಹೋಗಿದ್ದ ಚಿತ್ರವನ್ನ ಹೊಸದಾಗಿ ಬರೆದು...
  ಪುಟ್ಟ ಹೆಸರೊಂದನ್ನಿಟ್ಟು...
  ಅದಕ್ಕೊಂದು ಕನಸಿನ ದೃಷ್ಟಿ ಬೊಟ್ಟು ಹಚ್ಚಿ...
  ಬಣ್ಣ ತುಂಬುತ್ತಿರುವವನ ಬರುವಿಕೆಗಾಗಿ...
  ಕಾದು ಕುಳಿತ ಹುಡುಗಿ..- ತುಂಬಾ ಚೆನ್ನಾಗಿದೆ ಕಣ್ರೀ.. ಏನ್ರೀ ಎಲ್ಲ ಇಂಥ ಕವನಗಳನ್ನೇ ಬರೀತ್ತೀರ..
  ಈ ಕವನ ಅಂತೂ ತುಂಬಾ ತುಂಬಾ ತುಂಬಾ ಚೆನ್ನಾಗಿದೆ..

  ReplyDelete
 2. ತುಂಬಾ ತುಂಬಾ ಚೆನ್ನಾಗಿದೆ..

  ReplyDelete
 3. Dear, Miss.Lalitha, ರವರೆ, ನಿಜವಾಗಿಯೂ ನನಗೆ ನಿಮ್ಮಷ್ಟು, ತಾಳ್ಮೆ ಹಾಗು, ಭಾಷಾ ಪ್ರಭುತ್ವ khanditaa illa ,ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ,

  ಜಸ್ಟ್ ಒಂದೇ ಬಾರಿ ನಿಮ್ಮ ಬ್ಲಾಗನ್ನು ನೋಡಿದೆ, ಅದರ ಇಂಪ್ಯಾಕ್ಟ್ ಇದು, ಧನ್ಯವಾದಗಳು(ಕೋಟಿ+ಕೋಟಿ).

  ಇರಲಿ ನೀವು ಕೇಳಿದ ಹಾಗೆ ನಿಮ್ಮ (ನೀನೆ ನನ್ನ ನೀನೆ ನನ್ನ ತುಂಬಾ ತುಂಬಾ ) ಗೀತೆ ನನ್ನ ಬ್ಲಾಗಿನಲ್ಲಿ ಪೋಸ್ಟ್ ಮಾಡಿದ್ದೇನೆ, ದಯವಿಟ್ಟು ಒಮ್ಮೆ ಭೇಟಿ ಕೊಡಿ.

  http://kannadasonglyrics.blogspot.com/2011/03/manedevru-neene-nanna-neene-nanna.html

  ReplyDelete
 4. lalitaravarige ನನ್ನ ನಮಸ್ಕಾರ,

  ಹಾಗು,,, ನಿಮ್ಮ ನೆಚ್ಚಿನ "ನಾನೇ ನಿನ್ನ ನಾನೇ ನಿನ್ನ" Geeteya saahithya ಪೋಸ್ಟ್ ಆಗಿದೆ, ದಯವಿಟ್ಟು check maadi, haage thappiddre, comments bareyiri.  Dhanyavaadagalu...

  Manjunath Hiremath

  ReplyDelete
 5. Nimma comments ge dhanyavaadagalu, haage innondu shubhasuddi, ,.,,,, nimma nechchina surya the great chithradageetasaahithya kooda post aagide check maadi......
  http://kannadasonglyrics.blogspot.com/2011/03/surya-great-kannada-elu-janma-iddare.html  dhanyavaadagaLu

  ReplyDelete