Wednesday, January 19, 2011

ನಾ ನೋಡುತ್ತಿರುವ ಈ ಬಾನಿನ ಮೊದಲ ಹನಿಯು ನೀನೆ!!!!!

ಮರೆತರು ಮರೆಯಲಾಗದ ನೆನಪು ನೀನು
ಬರೆದರೂ ಮುಗಿಸಲಾಗದ ಕವಿತೆ ನೀನು
ತಿಳಿದರು ತಿಲಿಯಲಾಗದ ಒಗಟು ನೀನು
ನನ್ನ ಹೃದಯಕೆ ತಿಳಿಯದ ನೋವು ನೀನು
ಇಂತಿ ನನ್ನ ಪ್ರೀತಿಯ ನೀನ್ಯಾರು???


ನನ್ನೆದೆಯಾ ಪ್ರತೀ ಮಿಡಿತವು ನೀನಗಾಗಿ
ನಾ ನಂಬಿರುವಾ ದೇವರು ನೀನು
ಪ್ರತೀ ಕ್ಷಣವೂ ಕಾಡಿಸುವ ಆ ಮಾತು ನೀನು
ನಿನ್ನಾ ನಗುವಲ್ಲೇ ಸ್ವರ್ಗ ತೋರಿಸುವಾ
ಇಂತಿ ನನ್ನ ಪ್ರೀತಿಯ ನೀನ್ಯಾರು???

ಆ ಬಾನಿನಾ ಮೊದಲ ಹನಿಯು ನೀನೆ
ನನ್ನಾ ಹೃದಯದ ಮೊದಲಮಿಡಿತವು ನೀನೆ
ನನ್ನ ಸಾವಿನ ಕೊನೆಯ ಆಸೆಯೂ ನೀನೆ
ಇಂತಿ ನನ್ನ ಪ್ರೀತಿಯ ನೀನ್ಯಾರು???

ಕಾಣದ ಕನಸಲ್ಲಿ ಕಾಡಿಸುವ
ಮಾತ್ ಮಾತಿಗೂ ನೆನಪಾಗುವ
ಪ್ರತೀ ಕ್ಷಣವೂ ಯುಗವಂತೆ ಮಾಡುವ
ಕಣ್ಣಿರನ್ನೇ ಉಡುಗೊರೆಯಾಗಿ ಕೊಟ್ಟಿರುವ
ಇಂತೀ ನಿನ್ನ ಮರೆಯಲಾಗದ ನೀನ್ಯಾರು??
ಹೊಂಬಿಸಿಲಿನ ಆ ಕಿರಣದಂತೆ 
ದುಂಬಿಯ ಆ ಸವಿ ಗಾನದಂತೆ 
ನಿನ್ನ  ನಗುವಿಗೆ ಸಾಯುವ
ಕಂಬನಿಯಲ್ಲೇ ಮನೆ ಮಾಡುವ
ಇಂತಿ ನನ್ನ ಪ್ರೀತಿಯ ನೀನ್ಯಾರು???


ನನ್ನ ಎದೆಯಾಳದ ಮನಸು ನೀನು
ನನ್ನ ಕಣ್ಣಿನ ಕಂಪು ನೀನು
ನನ್ನ ನಗುವಿನ ಕಾರಣ ನೀನು
ಇಂತಿ ನನ್ನ ಪ್ರೀತಿಯ ನೀನ್ಯಾರು???ನಿನಗಾಗಿ ನಾ ನನಗಾಗಿ ನೀ ,,,, ನನ್ನ ಹೃದಯದ ಪ್ರತಿಮೀಡಿತ ನೀ ,,,, 

No comments:

Post a Comment