Friday, December 3, 2010

ಬದುಕಿನ ಬಂಡಿಗೆ ಸಾರಥಿ ಕಾಲುಂಗುರ

ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ
ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ

ಈ ಮಿಂಚುಗಳಲ್ಲೇ ಸಾರವಿದೆ
ಸಾರದಲ್ಲೇ ಸಂಸಾರವಿದೆ
ಅಂಗುಲಿಯಲ್ಲೇ ಮಂಗಳದ ಬಂಧನವಾಗಿದೆ ಬಂಧನವಾಗಿದೆ



ಸುತ್ತಲೂ ವಾದ್ಯ, ಜಾಗಟೆಗಳ ಸದ್ದು. ನೆರೆದವರ ಮನಸ್ಸು ಸಂಭ್ರಮದ ಕಡಲು. ನಮಗರ್ಥವಾಗದ ಪುರೋಹಿತರ ಸಾಲು ಸಾಲು ಶ್ಲೋಕಗಳು. ಆಗ ತಾನೇ ಕೊರಳಿಗೆ 'ತಾಳಿ' ಕಟ್ಟಿಸಿಕೊಂಡ ವಧುವಿನ ಮುಖದಲ್ಲಿ ಮುತ್ತೈದೆಯ ರಂಗು. ವರನ ಮುಖದಲ್ಲಿ ಮಲ್ಲಿಗೆ ನಗು, ನಾಳಿನ ಭರವಸೆಗಳು, ಹಸಿರಸಿರು ಕನಸುಗಳು. ದೊಡ್ಡವರು ಹೇಳೋ ಹಾಗೆ "ಗಂಡ ಒಂದೇ ಒಂದು ಸಲ ತನ್ನ ಹೆಂಡತಿಯ ಕಾಲನ್ನು ಮುಟ್ಟುತ್ತಾನಂತೆ, ಅದು ಕಾಲುಂಗುರ ತೊಡಿಸುವಾಗ".ಬೆಳ್ಳಿ ಕಾಲುಂಗುರವು ವರನು ವಧುವಿಗೆ ನೀಡುವ ಆಣೆಯ ಉಡುಗೊರೆ. 

ಬಾಳ ಕಡಲಲಿ ಪ್ರೇಮ ನದಿಗಳ ಸಂಧಿ ಸಮಯದಲಿ
ಮಿಂಚುವ ಮಿನುಗುವ ಸಾಕ್ಷಿ ಈ ಕಾಲುಂಗುರ
ನಾದಗಡಲಲಿ ವೇದ ಘೋಷದ ಸಪ್ತಪದಿಗಳಲಿ
ಬದುಕಿನ ಬಂಡಿಗೆ ಸಾರಥಿ ಕಾಲುಂಗುರ
ಶುಕವ ತರುವ ಸತಿ ಸುಖವ ಕೊಡುವ
ಮನ ಮನೆಯ ನೆಲದಲಿ ಗುನುಗುವ ಒಡವೆಯೋ

ಆದಿ ಕಾಲದ ವೇದ ಮೂಲದ ಸತಿಯ ಆಭರಣ
ಚೆಲುವಿಗೆ ಒಲವಿಗೆ ಗೌರವ ಕಾಲುಂಗುರ
ಐದು ಮುತ್ತುಗಳಾರು ಮುಡಿವಳೋ ಅವಳೆ ಮುತ್ತೈದೆ
ಸಿಂಧೂರ ಮಾಂಗಲ್ಯ ಮೂಗುತಿ ಓಲೆ ಕಾಲುಂಗುರ
ಹೃದಯ ತೆರೆದು ಉಸಿರೊಡೆಯ ತರದು
ಗಂಡು ಹೆಣ್ಣಿಗೆ ನೀಡುವ ಆಣೆಯ ಉಡುಗೊರೆ

ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ

No comments:

Post a Comment