Friday, December 3, 2010

ಸಪ್ತಪದಿ ಇದು ಸಪ್ತಪದಿ.......

ಸಪ್ತಪದಿ ಇದು ಸಪ್ತಪದಿ
ಈ ಏಳು ಹೆಜ್ಜೆಗಳ ಸಂಬಂಧ
ನಮ ಏಳು ಜನ್ಮಗಳ ಅನುಬಂಧ

ನಿನ್ನೊಡನೆ ನನ್ನ ಜೀವನದ ಮೊದಲ ಹೆಜ್ಜೆ ಇಡುವೆ
ಇದಕೆ ಹರಿಯ ಸಾಕ್ಷಿ ಎನ್ನುವೆ
ಸ್ವರ್ಗ ಸಮಾನ ಸುಖವ ನೀಡೆಂದು ಕೈಗಳನು ಮುಗಿವೆ
ಎರಡನೆ ಹೆಜ್ಜೆಯನು ಇಡುವೆ

ಮೂರು ಕಾಲದಲು ಏಕ ರೀತಿ ನಾ ಸಹಚರನಾಗಿರುವೆ
ಮೂರನೆ ಹೆಜ್ಜೆಯನು ಇಡುವೆ
ಮಮತೆ ಮೋಹ ಸುಖ ದುಃಖದಲ್ಲಿ ಜೊತೆಯಲ್ಲೇ ಇರುವೆ
ನಾಲ್ಕನೆ ಹೆಜ್ಜೆಯನು ಇಡುವೆ

ಜೊತೆಯಾಗಿ ನಾವು ಅಜ್ಞಾನದಿಂದ ಮುಕ್ತರಾಗೋಣ ಎನ್ನುತ
ಐದನೆ ಹೆಜ್ಜೆಯನು ಇಡುವೆ
ಆರು ಋತುಗಳಲಿ ನಲಿವ ಪ್ರಕೃತಿಯು ಸ್ವಾಗತ ನೀಡಲಿ ಎನ್ನುವೆ
ಆರನೇ ಹೆಜ್ಜೆಯನು ಇಡುವೆ

ಸಪ್ತ ಋಷಿಗಳ ಸ್ಮರಣೆ ಮಾಡುತ ಹರಸಿ ನಮ್ಮನು ಎಂದು ಬೇಡುತ
ಏಳನೇ ಹೆಜ್ಜೆ ಇಡುವೆ
ನಾ ಏಳನೇ ಹೆಜ್ಜೆ ಇಡುವೆ
ಸಪ್ತಪದಿ ಇದು ಸಪ್ತಪದಿ

No comments:

Post a Comment