Friday, December 3, 2010

ಮಾಂಗಲ್ಯ ಎಂಬ ಪದವು ಶ್ರೀಮತಿಗೆ ಸಿರಿಯ ವರವು, ಮುತೈದೆ ಎಂಬ ಪದವು ಹೆಣ್ಣಾದ ಅವಳ ಒಡವೆ

ಮಾಂಗಲ್ಯ ಮಾಂಗಲ್ಯ ಮುತ್ತೈದೆ ಹೆಣ್ಣಿಗೆ ಸಿಂಗಾರವೋ
ಮಾಂಗಲ್ಯವೆಂಬುದು ಕುಲನಾರಿಗೆ ನಿತ್ಯ ಸೌಭಾಗ್ಯವೋ
ನಗವೂ ಇದೆ, ನಗುವೂ ಇದೆ
ಜಗವೆಲ್ಲವೂ ಹಾರೈಸುವ ಮುಕ್ಕೋಟಿ ದೇವರ ಸಾಕ್ಷಿ ಇದೆ


!! ಧರ್ಮೇಚ ಅರ್ಥೇಚ ಕಾಮೇಚ ಇಮಾಂನಾತಿಚರಿತಮಿ !!

{ಸ್ವರ್ಣಾಭರಣಗಳಿಂದ ಕೂಡಿದವಳೂ, ಅಸ್ತಿತ್ಯಾದಿ ಗುಣವುಳ್ಳವಳೂ, ಸಕಲ ಸೌಭಾಗ್ಯನಿಧಿಯೂ ಆಗಿರುವ ಇವಳನ್ನು ನಾನು ಕೈಹಿಡಿದು ನನ್ನ ಬಾಳಿಗೆ ಧೃಡತೆಯನ್ನು ಇವಳ ಜೀವನಕ್ಕೆ ಶಾಶ್ವತತೆಯನ್ನು ತುಂಬಿಕೊಟ್ಟು ನೂರು ಶರತ್ಕಾಲ ಇವಳಿಗೆ ಸುಂದರ ಜೀವನ ನೀಡುತ್ತೇನೆ ಇದಕ್ಕೆ ಬ್ರಹ್ಮಾದಿ ದೇವತೆಗಳೇ ಸಾಕ್ಷಿ}

{ನಾದ ಮಂದಿರದ ವೇದದಿಂಚರದ ಮದುವೆ ಮಂಟಪದಲಿ
ನಲಿದವು ಲಕ್ಷದಕ್ಷತೆ ಪಡೆದವು ಧಾನ್ಯ ಧನ್ಯತೆ
ಪ್ರೇಮ ಸಿಂಚನದ ಬಾಳ ಬಂಧನದ ಪ್ರೇಮ ಶಾಸ್ತ್ರದೊಳಗೆ
ನಡೆದವು ಸಪ್ತಪದಿಗಳು ಮುಗಿದವು ಸಕಲ ವಿಧಿಗಳು
ಋತುವಿನ ಪಥದಲಿ ಬಾಳ ರಥವಿದೆ
ಪಯಣವ ಸವೆಸಲು ಪ್ರೇಮ ಜೊತೆಗಿದೆ
ಇರುಳು ಸರಿದು ಬೆಳಕು ಹರಿದು
ಕನಸು ಮುಗಿದು ಮನಸು ಜಿಗಿದು
ಸರಿಗಮಪ ಪದನಿಸ ಸಂಚಾರದಲಿ.....)

ಮಾಂಗಲ್ಯವೆಂಬುದು ಕಳಚಿಡುವ ಸರವಲ್ಲ
ಬಿಡಿಸದಿರೋ ಗಂಟು ಇದು
ಗಂಡಾಗಿ ಹೆಣ್ಣಾಗಿ ಇದ್ದವರು ಗಂಡ-ಹೆಂಡಿರಾಗೋ ನಂಟು ಇದು
ಸುಖವೇನೇ ನೋವೇನೇ ಬಂದಾಗಲೂ
ಕೈಬಿಡದೇ ಕಾಯೋದೇ ಪತಿಧರ್ಮವು
ಪತಿ ಹಾಕಿದ ಗೆರೆದಾಟದೆ ಇತಿಮಿತಿಯಲಿರುದೇ ಸತಿಧರ್ಮವು


ಮಾಂಗಲ್ಯ ಮಾಂಗಲ್ಯ ಮುತ್ತೈದೆ ಹೆಣ್ಣಿಗೆ ಸಿಂಗಾರವೋ
ಮಾಂಗಲ್ಯವೆಂಬುದು ಕುಲನಾರಿಗೆ ನಿತ್ಯ ಸೌಭಾಗ್ಯವೋ
ಮಾಂಗಲ್ಯವೆಂಬುದು ಬರಿ ಕರಿಮಣಿಯ ಸರವಲ್ಲ
ಬಿಡಿಸದಿರೋ ಬಂಧ ಅದು

ಕೈ ಹಿಡಿದು ನೆಡೆಯೊಳ ಕೈ ಬಿಟ್ಟು ನೆಡೆದರೆ
ಸ್ವರ್ಗದಲೂ ನರಕ ಇದೆ
ಕಣ್ಣಾಗೋ ಸತಿಮಣಿಗೆ ಕಣೀರು ತಂದಾರೆ
ಏಳಿಗೆಯ ಮಾತೆಲ್ಲಿದೆ?
ಕಡೆವರೆಗೂ ಕಾದಿರುವ ಆಣೆ ಇದೆ
ವಂಶನಾ ಬೆಳಗುವ ವರವೂ ಇದೆ
ರೆಪ್ಪೆಯಲಿ ಕಣ್ಣಂತೆಯೇ ಹೆಣ್ತನವ ಕಾಪಾಡೋ ಹೊಣೆಯೂ ಇದೆ

ಮಾಂಗಲ್ಯ ಮಾಂಗಲ್ಯ ಮುತ್ತೈದೆ ಹೆಣ್ಣಿಗೆ ಸಿಂಗಾರವೋ
ಮಾಂಗಲ್ಯವೆಂಬುದು ಕುಲನಾರಿಗೆ ನಿತ್ಯ ಸೌಭಾಗ್ಯವೋ
ನಗವೂ ಇದೆ, ನಗುವೂ ಇದೆ
ಜಗವೆಲ್ಲವೂ ಹಾರೈಸುವ ಮುಕ್ಕೋಟಿ ದೇವರ ಸಾಕ್ಷಿ ಇದೆ

No comments:

Post a Comment