Saturday, November 27, 2010

ನೀ ಬರುವೆ ಎಂದು ದಿನವೆಲ್ಲ ನಾ ಕಾದೆ…

ಮನಸಲ್ಲಿ ಬಂದಿಸಿದ ಪ್ರೀತಿಯು
ನೆನಪಾಗಿ ಮರುಕಳಿಸಿತ್ತು

ಕಣ್ಣ ಕನಸುಗಳೆಲ್ಲಾ ನೀರಾಗಿ ಹರಿವುತಿದೆ
ಹೃದಯವೂ ಹಟ ಮಾಡಿತ್ತು

ಮರೆತು ಬಿಡು ಎಂದರೆ ಮಡಿವೆ ಎಂದಿದೆ
ಮನಸಿನ ಮಾತು ನಾ ಕೇಳಲಾಗದೆ

ನನ್ನ ನೋವು ಮನಸು ಅರಿಯಲಾರದೇ
ಮೌನವಾದೆ ಯಾರಿಗೂ ನಾ ಹೇಳಲಾಗದೇ..

ನಾ ತಂದ ಕಾಣಿಕೆ ನಿನಗೆ ನೀಡಲು
ನೀ ಬರುವೆ ಎಂದು ದಿನವೆಲ್ಲ ನಾ ಕಾದೆ..

ಬಾರದ ಕಾರಣ ಕೂಡ ನನಗೆ ಗೊತ್ತು
ಆದರೂ ಕಾದಿದ್ದೆ…. ನಾ ನಿನ್ನ ಮರೆಯುವತನಕ
ಇಲ್ಲವೇ ನನ್ನ ಮರೆಯಲಾರೆ ಎಂದು ನೀ ಅರಿತು ಬರುವತನಕ

No comments:

Post a Comment