Tuesday, November 16, 2010

ಪ್ರೀತಿಯ ನಿನ್ನ ನೆನಪುಗಳನ್ನು ನಾನು ಯಾವ ಶಿಖರ ಹತ್ತಿ ಮರೆಯಲಿ?

ಆ ಕನಸಿನ ನೋಟ ಎಷ್ಟೊಂದು ಸುಂದರ. ಪ್ರೀತಿಯೆಂಬ ಈ ಕನ್ನಡಿಯಂತ ಪ್ರಪಂಚದಲ್ಲಿ ನಾ ಕಂಡ ಕನಸೆಲ್ಲವು ನನಸಾಗಿದ್ದರೆ ಎಷ್ಟು ಚೆಂದ ಅಲ್ವಾ? ಆದರೆ ಎಲ್ಲವೂ ನಾವು ಅಂದುಕೊಂಡ ಹಾಗೆ ಆಗಲು ಸಾಧ್ಯವೇ ಇಲ್ಲ ನಾವು ಎಣಿಸಿದ್ದೆ ಬೇರೆ, ಆಗಿದ್ದೆ ಬೇರೆ. ಮೊಗ್ಗು ಹೂವಾಗಿ ಇನ್ನೇನು ಅರಳುತ್ತಿದೆ ಎನ್ನುವ ಮುನ್ನ ವಿಧಿ ಅನ್ನೋ ಕಹಿ ಸತ್ಯ ವಿಷದಂತೆ ಪ್ರೀತಿಯನ್ನು ಕವಚಿ ಹಾಕಿ ಮೊಗ್ಗನ್ನೇ ಕಿತ್ತು ಬಿಸಾಕಿ ಬಿಟ್ಟಿತು. 


ಯಾಕೆ ನೀನು ನನ್ನ ಮರೆತುಬಿಟ್ಟೆ, .ನಿನ್ನ ನೆನಪೆಂಬ ಉಡುಗರೆ ಕೊಟ್ಟು ನನ್ನ ಬಾಳಲ್ಲಿ ಅತಿಥಿಯಾಗಿ ಯಾಕೆ ಬಂದು ಹೋದೆ? ಯಾವುದೋ ಅಪರಿಚಿತಳೊಂದಿಗೆ ಹೊಚ್ಚ ಹೊಸದಾಗಿ ಬದುಕು ಪ್ರಾರಂಭಿಸುವ ಸಂಭ್ರಮಕ್ಕೆ ಮರುಳಾದೆಯಾ? ಇಲ್ಲಿ ಮುಗಿದು ಮತ್ತೆಲ್ಲಾ ಜಿಗಿಯುವ ಬಯಕೆಗೆ ಈಡಾದೆಯ? ನನ್ನಿಂದ ನೀನು ದೂರಾಗುವ ಸಮಯದಲ್ಲಿ ನಿನ್ಗೆ ನನ್ನ ಒಂದು ಮಾತು ಕೇಳಬೇಕು ಅನಿಸಿಲ್ವಾ? ನಿಜ ಹೇಳು, ಅಷ್ಟು ಆಣೆಗಳನ್ನು ಇನ್ನೊಬ್ಬಳಿಗೆ ಮಾಡುವಾಗ ನಿನ್ನ ಮನಸಲ್ಲಿರುವ ನಾನು ಸ್ಪಲ್ಪನೂ ನೆನಪಾಗಿಲ್ವಾ? ನಿನಗೇನು ಗೊತ್ತು ನನ್ನ ಮನದ ಒದ್ದಾಟದ ವೇದನೆ, ನಿನಗೆ ಇದೆಲ್ಲಾ ತಿಳಿದಿದ್ದರೆ ನೀ ನನ್ನ ಬಾಳಿನಿಂದ ದೂರ ಹೋಗುತ್ತಿರಲಿಲ್ಲ.


ಬಾನಾಡಿಗೊಂದು ಸವಿಮಾತು ಕಲಿಸುವ ಕನಸುಗಳ ಆ ಪ್ರೀತಿಯ ಚಿತ್ತ-ಚಿತ್ತಾರ ಮುಸುಕಿ ಹೋಯಿತು. ಪ್ರೀತಿಯ ಮನಸ್ಸೊಂದು ಸಾಕು ಅಂಧಾರೆ ಆದರೆ ಆ ಪ್ರೀತಿಗೆ ವಿಧಿ ಅನ್ನೋ ಟೈಮ್ ಕೂಡ ಬೇಕು ಅಲ್ವಾ? ಆ ದಿನಗಳು ಪ್ರತಿಕ್ಷಣ ಹೃದಯದೊಳಗೆ ಹಸಿರಾಗಿದೆ  ಪದೇ ಪದೇ ನನ್ನ ಬಿಡದೆ ಇರುವ ಕಾಡುವ ನೆನಪುಗಳನ್ನು ಕೋಟ್ಟು ಪ್ರೀತಿಯ ಆ ಹಾದಿಯ ಯಾಕೆ ಬಿಟ್ಟು ಹೋದೆ.......?


ನಿನ್ನ ನೋಡಬೇಕು ಅನಿಸಿದಾಗೆಲ್ಲಾ ನನ್ನ ಕಲ್ಪನೆ ಹುಡುಕಿ ಹೋಗುತಿತ್ತು ಅಷ್ಟೇ ಮತ್ತೆ ನನ್ನ ಮನಸ್ಸು ಅಲ್ಲೇ ಮೌನ ತಾಳುತಿತ್ತು. ಆ ನೋವಲ್ಲೂ ಕೂಡ "ನಿನ್ನ ಪ್ರೀತಿ ಇನ್ನು ಪೂರ್ತಿಯಾಗಿ ಕೈಜಾರಿ ಹೋಗಿಲ್ಲ" ಎನ್ನುವ ಸಮಧಾನದ ಮಾತು ನನ್ನಲ್ಲಿ ಹೇಳ್ತಾನೇ ಇತ್ತು. ಅಷ್ಟರಲ್ಲಿ ಬೇಸರದ ಕಣ್ಣೀರು ಕೂಡ ನನ್ನ ಕೆನ್ನೆ ನೇವರಿಸಿ ಮಾತಾಡುತಿತ್ತು. ಆದರೂ ಕೂಡ ನಾವು ಕುಳಿತು ಮಾತಾಡುತಿದ್ದ ಜಾಗಗಳನ್ನು ನೋಡಿದಾಗ ಆ ದಿನಗಳು ಎಷ್ಟು ನೆನಪಾಗತ್ತೆ ಗೊತ್ತಾ?.....ಎಷ್ಟು ಪ್ರಯತ್ನಿಸಿದರೂ ನೀನೆಲ್ಲೋ........... ನಾನೆಲ್ಲೋ .......... ಇದ್ದರೂ ಕೂಡ ಹಸಿರ ಎಲೆಯ ಮೇಲೆ ಇಬ್ಬನಿ ಬಿದ್ದ ಹಾಗೆ ಎದ್ದು ಕಾಣುತ್ತಿದೆ. 


ನಿನ್ನ ಪ್ರೀತಿ ಕಳೆದುಕೊಂಡ ಈ ಜೀವನ ಹೇಗಿದೆ ಅಂತ ಸ್ಪಲ್ಪವಾದರೂ ಆಲೋಚಿಸಿದ್ದಿಯಾ?.... ನಿನಗಂತು ನಿನ್ನ ಪ್ರೀತಿ ಇನ್ನೊಬ್ಬಳಲ್ಲಿ ಸಿಕ್ಕಿದೆ. ಆದರೆ ನನಗೆ ನನ್ನ ಪ್ರೀತಿಯನ್ನು ನಿನ್ನ ಬಿಟ್ಟು ಬೇರೆಯವರಲ್ಲಿ ಕಂಡುಕೊಳ್ಳಲು ಮನಸುಪ್ಪುತ್ತಿಲ್ಲ. ನೀ ದೂರಾದ ನಂತರ ನನ್ನ ಈ ಜೀವನ ಹೊಂಗನಿಸಿನ ಚಾದರ ಎಂದು ತಿಳಿದು ಮುಳ್ಳಿನ ಹಾಸಿಗೆಯಲ್ಲಿ ಮಲಗಿದ ಹಾಗೆ ಅನಿಸುತಿತ್ತು. ಜೀವ ಕಳೆದ ಅಮೃತಕೆ ಒಲವು ಅಂಧಾರೆ...... ಪ್ರಾಣ ಉಳಿಸೋ ಕಾಯಿಲೇನೆ ಪ್ರೀತಿ ಅಂಧಾರೆ. ಇದು ನನ್ನ ಜೀವನದಲ್ಲಿ ಅಕ್ಷರಶಃ ಸತ್ಯವಾಯಿತು. ಇಷ್ಟು ದಿನ ನನ್ನ ಜೀವನದಲ್ಲಿ ಅತ್ಯುನ್ನತ ಖುಷಿ ಎಂದರೆ ನಿನ್ನ ಪ್ರೀತಿಯ ನೆನಪುಗಳೆಂದರೆ ತಪ್ಪಾಗದು. ನಿನಗೆ ಒಂದು ಮಾತು ಹೇಳಬೇಕು ಅನಿಸತ್ತೆ ನಿನ್ನ ಪ್ರೀತಿಗೋಸ್ಕರ ನಾ ಬರೆದ ಈ ಎಲ್ಲಾ ಪತ್ರಗಳನ್ನು ಪ್ರತಿದಿನವೂ ಪ್ರತಿಕ್ಷಣವು ನಿನ್ನ ಮನಸ್ಸು ನೆನಪು ಮಾಡಿ ಮೆಲುಕು ಹಾಕಿ ಓದುತ್ತಾ ಇರಲಿ ಪ್ಲೀಸ್. ಈ ನಮ್ಮ ಪ್ರೀತಿಗೆ ಅಗಲಿಕೆ ಅನಿವಾರ್ಯ ಇರಬಹುದು ಆದರೂ ಯಾವಾಗಲೂ ಕೂಡ ನನ್ನ ಮನಸ್ಸು ನಿನ್ನ ಹತ್ರಾನೇ ಇದ್ದು " ನಗುತಿರು ಓ ನನ್ನ ಒಲವೇ" ಅಂತ ಹೇಳ್ತಾನೆ ಇರತ್ತೆ.


ನಿನ್ನ ಪ್ರೀತಿ ಕಳೆದುಕೊಂಡ ಬಗ್ಗೆ ಮನಸ್ಸಿನಲ್ಲಿ ತುಂಬ ಬೇಸರವಿದೆ ಆದರೆ ನಿನ್ನ ಬಿಟ್ಟು ಬದುಕಿರಲಾರೆ ಎಂಬ ಅತಿರೇಕವಾದ ಮಾತುಗಳನ್ನು ನಾನು ಬರೆಯುವುದಿಲ್ಲ ಎಕೆಂದರೆ ನಿನ್ನನ್ನು ನಂಬಿ ನಾನು ಭೂಮಿಗೆ ಬಂದವಳಲ್ಲ ಅಷ್ಟೇ ಅಲ್ಲದೇ ಪ್ರತಿಯೊಬ್ಬರಿಗೂ ಆ ದೇವರು ಹುಟ್ಟುವಾಗಲೇ ಹಣೆಯಲ್ಲಿ ಅವರ ಭವಿಷ್ಯದ ಬಾಳ ಸಂಗಾತಿಯ ಹೆಸರನ್ನು ಬರೆದಿರುತ್ತಾನಂತೆ ಆದರೆ ನಿನ್ನ ವಿಷಯದಲ್ಲಿ ಆ ಅದೃಷ್ಟ ನನಗಿಲ್ಲ ಅವನು ತಪ್ಪಾಗಿ ಬೇರೆ ಯರದೋ ಹೆಸರನ್ನು ನಿನ್ನ ಹೆಸರ ಜೊತೆ ಬರೆದಿರಬೇಕು. ಇದೆಲ್ಲದರ ಸಲುವಾಗಿ ನೀ ನನ್ನ ಬಾಳಿಂದ ದೂರ ಸರಿದಿರುವೆ. ಆ ದೇವರು ಲೆಕ್ಕಚಾರ ಹಾಕುವಾಗ ತಪ್ಪು ಮಾಡಿದನೇ ? ನಿನ್ನ ಹೆಸರ ಜೊತೆ ನನ್ನ ಹೆಸರು ಬರೆದಿದ್ದರೆ ಏನಾಗುತಿತ್ತು?........................................................... ಒಂದರ್ಥದಲ್ಲಿ ನನ್ನ ವಾದ ತಪ್ಪೆನಿಸುತ್ತದೆ. ಪ್ರತಿಯೊಬ್ಬರಿಗೂ ಅವರಿಷ್ಟದಂತೆ ಎಲ್ಲವೂ ಲಭಿಸಿದರೆ ಅವನನ್ನು ಭಕ್ತಿಯಿಂದ ಪ್ರಾರ್ಥಿಸುವವರು ಯಾರು ಅಲ್ವಾ?


ಪ್ರೀತಿ ಬದುಕಲು ಬಿಡುವುದಿಲ್ಲ, ಸ್ನೇಹ ಸಾಯಲು ಬಿಡುವುದಿಲ್ಲ ನಿಜವಾದ ಮಾತು ಅಲ್ವಾ? ನಿನ್ನ ಪ್ರೀತಿಗೆ ನಾನು ಸೋತು ಹೋಗಿರಬಹುದು ಆದರೆ ನನ್ನ ಪ್ರೀತಿ ಸೋತಿಲ್ಲ ನಾನೆಂದು ನಿನ್ನ ಪ್ರೀತಿಸುತ್ತೇನೆ. ನಾನಿಂದು ನಿನ್ನಿಂದ ಕಳೆದುಕೊಂಡಿದ್ದು ಸನಿಹ ಮಾತ್ರ. ನಿನ್ನೋಲವು ಯಾವತ್ತು ಕೂಡ ನನ್ನಲ್ಲಿಯೇ ಇರುತದೆನ್ನುವ ನಂಬಿಕೆ ನನ್ನಲ್ಲಿದೆ. ಆ ನಿನ್ನ ಪ್ರೀತಿ ನನ್ನಲ್ಲೇ ಇದೆ. ನಿನ್ನ ನೆನಪುಗಳನ್ನು ನಾನು ಯಾವ ಶಿಖರ ಹತ್ತಿ ಮರೆಯಲಿ?  ನಿನ್ನ ನೆನಪುಗಳು ಸಾಯುತ್ತಿಲ್ಲ ಕಣೋ.. ನಿನ್ನ ಸವಿನೆನಪುಗಳ ಕುರಿತು ಎಷ್ಟು ಬರೆದರೂ ಸಾಲದು. ನಿನ್ನ ನೆನಪುಗಳನ್ನು ಮರೆಯಬೇಕು ಎಂದು ಮನಸ್ಸು ಕಲ್ಲು ಮಾಡಿಕೊಂಡೆ ಆದರೆ ಆ ಕಲ್ಲೇ ಶಿಲೆಯಾಗಿ ನಿನ್ನ ನಗುಮುಖವಾದರೆ ನಾನೇನು ಮಾಡಲಿ ನಿನೇ ಹೇಳು. ಈಗ ಕೊನೆಯದಾಗಿ ಹೇಳ್ತಾ ಇದೀನಿ  ನೀ ನನ್ನ ಜೊತೆಯಿಲ್ಲಿ ಇಲ್ಲದಿದ್ದರೂ ನಿನ್ನ ನೆನಪುಗಳ ಮಧುರಯಾತನೆಯೊಂದಿದ್ದರೆ ಸಾಕು ನಾ ನನ್ನ ಜೀವನವಿಡೀ ಹಾಯಾಗಿರುವೆ.....

                                                                                                                      ಇಂತೀ 
                                                                                                    ನಿನ್ನ ಪ್ರೀತಿಸುವವಳು


No comments:

Post a Comment