![]() |
Add caption |

ಮದುವೆ - ಬಹುದಿನದ ಕನಸದು. ಏನೋ ನಿರೀಕ್ಷೆ. ಅದೇನೋ ಸಂಭ್ರಮ. ಸಂತೋಷ, ಸಡಗರ, ಜೊತೆಗೊಂದಿಷ್ಟು ಅಳುಕು. ಕೊನೆಗೂ ಆ ದಿನ ಬಂದಿದೆ. "ಮಾಂಗಲ್ಯಮ್ ತಂತುನಾನೇನ ಮಮ ಜೀವನ ಹೇತುನಾ.. ಕಂಠೆ ಬಧ್ನಾಮಿ ಸುಭಗೇ ತ್ವಂ ಜೀವ ಶರದಾಂ ಶತಮ್’’ ಎನ್ನುವ ಮಂತ್ರದ ಜೊತೆಯಲ್ಲಿ ಗಟ್ಟಿಮೇಳ, ಶುಭಾಶೀರ್ವಾದದ ಅಕ್ಷತೆಕಾಳು, ಹಿರಿಯರ ಆಶೀರ್ವಾದ, ಕಿರಿಯರ ಹಾರೈಕೆ ಮೇಳೈಸುವ, ಸಂಭ್ರಮದಲ್ಲಿ ಸಪ್ತಪದಿ ತುಳಿದು, ಕನಸಿನಂತೆ ಬದುಕಿಗೆ ಪ್ರವೇಶಿಸುವ ಈ ದಿನ ಪ್ರತಿ ಹೆಣ್ಣು-ಗಂಡಿನ ಜೀವನದ ಬಹುದೊಡ್ಡ ಕನಸು.
ಮದುವೆಯ ಮೂಲ ಉದ್ದೇಶ ಇಹಲೋಕವನ್ನು ಬೆಳೆಗಿಸುವುದು. ಮದುವೆಗು ಇಹಲೋಕದ ಬೆಳೆಗುವಿಕೆಗೂ ಎಂಥ ಸಂಬಂಧವೆನ್ನುತ್ತಿರಾ? ಜಗತ್ತು ಬೆಳಗಲು ಬೇಕು ಜೀವಿಗಳ ಸೃಷ್ಟಿ ಜೀವಿಗಳ ಸೃಷ್ಟಿಗೆ ಬೇಕು ಸ್ತ್ರೀ-ಪುರುಷ ಸಂಗಮ. ಜಗತ್ತು ಬೆಳಗಬೇಕಾದರೆ ಉತ್ತಮ ಪ್ರಜೆಗಳ ಅಗತ್ಯವಿದೆ. ಉತ್ತಮ ಪ್ರಜೆಗಳ ಸೃಷ್ಟಿಗಾಗಿಯೇ ಈ ವಿವಾಹ ಮಹೋತ್ಸ್ವ. ಸ್ಮುದ್ರಮಥನ ಕಾಲದಲ್ಲಿ ಲಕ್ಷ್ಮೀನಾರಾಯಣರ ಕಲ್ಯಾಣೋತ್ಸವ ನೆಡೆಯಿತು ಎನ್ನುತ್ತದೆ ಪುರಾಣಗಳು, ಜಗತ್ತಿನ ಕಲ್ಯಾಣವಾಗಬೇಕಾದರೆ ಜಗದೊಡೆಯ ನಾರಾಯಣನಿಗೆ ಲಕ್ಷ್ಮೀ ಜೊತೆ ಕಲ್ಯಾಣವಾಗಬೇಕು.ಆಗಿದೆ ಕೂಡ.
ಎತ್ತಿದರು ಮುತ್ತಿನಾರತಿಯ ಮುತ್ತಯ್ದೆಯರು
ನಾನು ಹಣೆಯ ಮೇಲೆ ಯಾವಗಲು ಕುಂಕುಮದ ಬಿಂದಿ ಇಟ್ಟವಳಲ್ಲ... ಈ ಕುಂಕುಮದ ಬಿಂದಿಗೆ ನಮ್ಮ ಸಂಪ್ರಾದಯದಲ್ಲಿ ತುಂಬ ಮಹತ್ವವಿದೆ.. ನಾ ಹಿಂದೆ ಎಲ್ಲೊ ಕೇಳಿದ್ದೆ ಕುಂಕುಮ ಇಟ್ಟ ಹೆಣ್ಣಿನ ಮುಖವನ್ನ ಯಾರಾದ್ರು ನೋಡಿದಾಗ ಅವರ ಕಣ್ಣು ಅವಳ ಕುಂಕುಮದ ಮೇಲೆಯೇ ಕೇಂದ್ರೀಕ್ರತವಾಗತ್ತೆ ಮತ್ತು ಅವಳ ಬೇರೆ ಯಾವ ಸೌಂದರ್ಯವನ್ನು ನೋಡಿ ಚಂಚಲಚಿತ್ತರಾಗಲು ಅವಕಾಶವಿರುದಿಲ್ಲವಂತೆ... ಅಂತ ಕುಂಕುಮವು ಮದುವೆಯ ಈ ದಿನ ಖುಶ್ ಖುಶಿಯಿಂದ ಇಟ್ಕೊಳ್ತಾ ಇದೀನಿ
ನಾನು ಹಣೆಯ ಮೇಲೆ ಯಾವಗಲು ಕುಂಕುಮದ ಬಿಂದಿ ಇಟ್ಟವಳಲ್ಲ... ಈ ಕುಂಕುಮದ ಬಿಂದಿಗೆ ನಮ್ಮ ಸಂಪ್ರಾದಯದಲ್ಲಿ ತುಂಬ ಮಹತ್ವವಿದೆ.. ನಾ ಹಿಂದೆ ಎಲ್ಲೊ ಕೇಳಿದ್ದೆ ಕುಂಕುಮ ಇಟ್ಟ ಹೆಣ್ಣಿನ ಮುಖವನ್ನ ಯಾರಾದ್ರು ನೋಡಿದಾಗ ಅವರ ಕಣ್ಣು ಅವಳ ಕುಂಕುಮದ ಮೇಲೆಯೇ ಕೇಂದ್ರೀಕ್ರತವಾಗತ್ತೆ ಮತ್ತು ಅವಳ ಬೇರೆ ಯಾವ ಸೌಂದರ್ಯವನ್ನು ನೋಡಿ ಚಂಚಲಚಿತ್ತರಾಗಲು ಅವಕಾಶವಿರುದಿಲ್ಲವಂತೆ... ಅಂತ ಕುಂಕುಮವು ಮದುವೆಯ ಈ ದಿನ ಖುಶ್ ಖುಶಿಯಿಂದ ಇಟ್ಕೊಳ್ತಾ ಇದೀನಿ
ಇವತ್ತಿನಿಂದ ನನ್ನ ಹೊಸ ಜೀವನ ಪ್ರಾರಂಬಿಸಬೇಕು ಅಂತ ಅಂದು ಕೊಂಡಿದ್ದೇನೆ. ಈ ಹೊಸ ಜೀವನದ ಹೆಜ್ಜೆ ನಮ್ಮಿಬ್ಬರ ಮನೆಯಲ್ಲಿರುವವರ ಮಖದಲ್ಲಿ ಸಂತೊಷ ತರುವಾಗೆ ಇತ್ತು... ಅಂತು ಇಂತು ನನ್ನ ಎಲ್ಲರ ಇಷ್ಟದಂತೆ ನನ್ನ ಮದುವೆಯಂತು ಅಯಿತು...
ಮೂರು ಗಂಟು ಬೆಸೆದು, ಮೂರು ಕಾಲದಲ್ಲೂ ಸಹ ಜೊತೆಗಿದ್ದು, ಸುಂದರ ಜೀವನ ಕೊಡುತ್ತೇನೆ ಎನ್ನುವ ಅರ್ಥದಲ್ಲಿ ಕಟ್ಟಿರುವ ತಾಳಿ ಎಷ್ಟೇ ಚಿನ್ನದ ಒಡವೆಗಳಿದ್ದರೂ ಇದಕ್ಕಿಂದ ಪಾವಿತ್ರ್ಯತೆ ಒಂದಿಷ್ಟು ಸಹಾ ಕುಗ್ಗುದಿಲ್ಲವಂತೆ ,ದಾಂಪತ್ಯದಲ್ಲಿ ಎಷ್ಟೇ ಅಪಸ್ವರಗಳಿದ್ದರೂ, ಎಷ್ಟೇ ಅಸಮಾಧಾನಗಳಿದ್ದರೂ, ಎರಡು ಹೃದಯಗಳನ್ನು ಬೆಸೆಯುವ ಮಂಗಳಸೂತ್ರದ ಶಕ್ತಿ ಅಪರಿಮಿತ ಎನ್ನುತ್ತಾರೆ ಅಂತ ಪವಿತ್ರ ತಾಳಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ.
ಮದುವೆ ಅನ್ನೋದು ಅನುರಾಗದ ಸಂಗಮ, ಅನುಬಂಧದ ಸಂಗಮ ಎರದು ಹೃದಯಗಳು ಬೆರೆತು ಬಾಳುವ ಮಧುರ ಮಹೋತ್ಸವವದು. ಮೂರು ಗಂಟಿನಿಂದ ಮದುವೆ ಪೂರ್ಣವಾಗದು, ಸಪ್ತಪದಿಯ ಮೀರಿದಂತ ಜೀವನ ಇದು, ಅಷ್ಟಪದಿಗೆ ಸಾಗುವಂತ ಪ್ರೇಮ ಪದವು ಇದು, ನಾತಿಚರಾಮಿ ಮಂತ್ರವನು ಬಲ್ಲವನೊಂದಿಗೆ ಹೆಜ್ಜೆಯನು ಇಡುತ ನಡೆದರೆ ಬದುಕ ಬೆಳಗಿಸೋ ಸುಂದರ ಸಮಯವಿದು, ಮುಗಿಯದ ಪಯಣವಿದು,
ನಮ್ಮಿಬ್ಬರ ಈ ಬಂಧ ಅಳಿಯದೆ ಕೊನೆಯವರೆಗೂ ಉಳಿಯಲಿ ನಮ್ಮ ಬಾಳಿನಲ್ಲಿ ನಾವು ಹೆಜ್ಜೆ ಇಡುವ ಆ ದಾರಿಯಲ್ಲಿ ನಮ್ಮಿಬ್ಬರ ಹೆಜ್ಜೆಗಳು ಎಂದೂ ಏರುಪೇರಾಗದೇ ಸರಿಸಮಾನವಾಗಿ ಸಾಗುತ್ತಿರಲಿ, ನಾ ನಡೆಯುವ ಈ ಹೊಸ ಹಾದಿಯಲ್ಲಿ ಕಲ್ಲು ಮುಳ್ಳುಗಳಿರದಿರಲಿ, ಕೇವಲ ಹೂವುಗಳಿರಲಿ, ಹಕ್ಕಿಗಳ ಚಿಲಿಪಿಲಿಗಳಿರಲಿ,
ಯಾರಿಗ್ಗೊತ್ತು, ಎಲ್ಲಿಯೂ ಸಿಗದ ಅಮೂಲ್ಯ ಪ್ರೀತಿ ಇವನಲ್ಲಿಯೇ ಸಿಗುಬಹುದು. ವಿಷಾದಗಳೆಲ್ಲವನ್ನೂ ಕಟ್ಟಿಟ್ಟು, ಹೊಸ ಜೀವನಕ್ಕೆ, ಹೊಸ ಪ್ರೀತಿಗೆ ಮೈ ಒಡ್ಡಿ, ಹೊಸ ಗುರಿಗಳೊಂದಿಗೆ ಹೊಸ ಬದುಕಿಗೆ ಕಾಲಿಡುತಿರುವ ನನಗೆ ನಿಮ್ಮೆಲ್ಲರ ಹರಕೆ ಹಾರೈಕೆಗಳಿರಲಿ.
ನಿರೂಪಣೆಗೆ ಫುಲ್ ಮಾರ್ಕ್ಸ.
ReplyDeleteCan i have your email id pls?
ReplyDeleteಕಾಯ್ದ ಭಾವನೆಗಳು ರುಚಿಕರ ಹಣ್ಣಾಗಿ ಸವಿಯುವಂತಿವೆ... ಸುಂದರ ಬರಹ....
ReplyDelete