Saturday, March 31, 2012

♥♥♥ ಬಯಸಿದ್ದೆಲ್ಲ ಸಿಗದು ಬಾಳಲಿ ♥♥♥

ಆತ್ಮೀಯರೇ,
ಬರಹ ಬದುಕನ್ನು ತೋರುವುದಿಲ್ಲ, ಬದುಕಲ್ಲಿ ನಡೆಯುವುದೆಲ್ಲಾ ಬರಹಕ್ಕೆ ಇಳಿಸಲಾಗುವುದಿಲ್ಲ . ಇಲ್ಲಿ ನಾನು ಬರೆಯುವ ಪ್ರತಿ ಕವನದ ಹಿಂದೆ ಒಂದೊಂದು ಮುದ್ದು ಹುಡುಗಿಯರ ನೋವಿನ ಕಥೆಗಳಿವೆ. ಹೃದಯ ತೋರಿಸಿ ಬದುಕನಳಿಸಿದ ಹುಡುಗರ ಅಟ್ಟಹಾಸವಿದೆ.ಯಾವುದೋ ಕಥೆ ಯಾವುದೋ ವ್ಯಥೆ ಇದೆ. ಆಗ ತಾನೆ ಪ್ರೀತಿಗೆ ಬಿದ್ದ ಹುಡುಗಿಯ ತುಂಟ ವಿಸ್ಮಯವಿದೆ. ಹುಡುಗನ ಸೆಳೆಯುವ ಆಸೆ ಇದೆ. ನಿದಿರೆಯ ಕನವರಿಕೆ ಇದೆ. ಯಾವುದೋ ಒಂದು ಹುಡುಗಿಯ/ಹೆಣ್ಣಿನ ಬದುಕಿನ ಬರಹವಲ್ಲ ಇದು. ಪ್ರತಿ ಹೆಣ್ಣಿನ ಜೀವನದಲ್ಲಿ ಒಂದಲ್ಲ ಒಂದು ಸಾರಿ ಬಂದು ಹೋಗುವ ಭಾವಗಳಿಗೆ ಬಣ್ಣ ಬೆರೆಸಿ ಇಲ್ಲಿ ಮೆರೆಸುತ್ತೇನಷ್ಟೆ.

3 comments:

  1. ವಾವ್ಹ್.. ಎಂತಹ ಸುಮಧುರ ಮಾತುಗಳು....
    ನೋವುಗಳು ಬೆಂಬಿಡದೆ ಬೆನ್ನಟ್ಟಿದಾಗ ಮನನ ಮಾಡಿಕ್ಕೋಳ್ಳಬೇಕಾದ ಸಂಗತಿಗಳಿವು...
    ಕನಸು ಕಾಣುವುದು ತಪ್ಪಲ್ಲ... ವಾಸ್ತವದ ನೆಲೆಯಲ್ಲಿ ನಮ್ಮ ಕನಸಿದ್ದರೆ ನೋವಿಲ್ಲ...

    ReplyDelete
  2. ಧನ್ಯವಾದಗಳು................
    ನೀವು ಹೇಳಿದಂತೆ ನೋವುಗಳು ಯಾವಾಗಲೂ ಬೆಂಬಿಡದ ಭೂತವಿದ್ದಂತೆ..... ಈ ಕನಸುಗಳು ವಾಸ್ತವ್ಯದ ನೆಲೆಯಲ್ಲಿ ಇರುವುದು ತುಂಬಾ ಅಪರೂಪ.

    ReplyDelete
  3. ನಿಜ...ಮನಸ್ಸು ಮರ್ಕಟ.
    ಬುದ್ಧಿಗೆ ತಕ್ಕನಾಗಿ ಕನಸು ಮೂಡುವುದಲ್ಲ.. ಮನಸ್ಸಿನ ಮಾತೆ ಕನಸಿಗೆ ಹಿತವಾಗಿ ತೋರುತ್ತದೆ.....
    ಅದಿಕ್ಕೆ ನೋವುಗಳು., ನೆನಪುಗಳು ಕಾಡುವುದು...

    ReplyDelete