Saturday, August 6, 2011

♥ ತರ ತರ ಹಿಡಿಸಿದೆ ಮನಸಿಗೆ ನೀನು ... ಹಗಲಲೇ ಮುಳುಗಿದೆ ಕನಸಲಿ ನಾನು ♥

ತರ ತರ ಹಿಡಿಸಿದೆ ಮನಸಿಗೆ ನೀನು ..
ಹಗಲಲೇ ಮುಳುಗಿದೆ ಕನಸಲಿ ನಾನು .. 
ಕುಂತರೂ ನಿಂತರೂ ನಿನ್ನ ಭಜನೆ ಬೇರೇ ಕೆಲಸಾನೆ ಇಲ್ಲ...
ಪ್ರತಿರಾತ್ರಿಯು ನಿನ್ನದೇ ನಿನ್ನದೇ.. 
ನಿನ ಜಾತ್ರೆಯು ಸಾಗಿದೆ ಸಾಗಿದೆ..
ಇದಕೊಂದು ಪರಿಹಾರ ತಿಳಿಸು ....

ನಿನ್ನ ಪ್ರೀತಿಯ ನೆನಪುಗಳು ಸಹ, ಥೇಟ್ ನಿನ್ನ ಥರಾನೆ.. ನನ್ನ ಜೊತೆ ತುಂಟಾಟ ಆಡುತ್ವೆ.. ನನ್ನ ಸತಾಯಿಸಿ, ನಗಿಸಿ, ಅಳಿಸಿ.. ಒಮ್ಮೆ ಕೆನ್ನೆ ಕೆಂಪಗಾಗಿಸುತ್ತೆ. ನೀನು ನನ್ನ ಹತ್ತಿರ ಮಾತಾಡ್ತಾ ಇದ್ರೂ.. ನಿನ್ನ ನೆನಪುಗಳು ನನಗೆ ಇನ್ನೂ ಹತ್ತಿರ.. ನೀನು ನನಗೆಷ್ಟು ಹತ್ತಿರಾನೋ ಅದಕ್ಕಿಂತ ಜಾಸ್ತಿ ಹತ್ತಿರ ನಿನ್ನ ನೆನಪುಗಳು.. ಯಾಕಂದ್ರೆ ನೆನಪುಗಳು ಬೇಕು ಅನಿಸಿದಾಗಲೆಲ್ಲ ನನ್ನ ಹತ್ರ ಓಡಿ ಬರುತ್ವೆ..ನೀನು ನನ್ನಿಂದ ಒಂದಿನ ಒಂದು ಕ್ಷಣ ಮಾತಾಡ್ದೇನೆ ದೂರ ಹೋಗಬಹುದು.. ಆದರೆ ನಿನ್ನ ನೆನಪುಗಳು ಹಾಗಲ್ಲ.. ಅವು ಎಂದೆಂದೂ ನನ್ನವು.. ಮತ್ತೆ ಎಂದೂ ನನ್ನಿಂದ ದೂರ ಆಗೋಲ್ಲ ಅವು..

ನಾನ್ ನಿನ್ ಬಗ್ಗೆ ಕಾಣೋ ಕನಸುಗಳಿಗೆ ಏಣೆಯೇ ಇಲ್ಲ.. ಒಂದೊಂದಾಗಿ ಹೇಳ್ತಾ ಹೋಗ್ತೀನಿ..ನೀನ್ ಹಾಗೆ ಕೇಳ್ತಾ ಹೋಗ್ತಿಯಾ?......
ನೀನ್ ಹಾಕೊಂಡಿರೋ ಶರ್ಟ್ ಮೇಲೇನೇ ನಾನು ಬಟನ್ ಪೋನಿಸ್ತಾ ಇದ್ರೆ ಎಷ್ಟು ಹಿತ ಅನ್ಸುತ್ತೆ ಗೊತ್ತಾ?


ನೀನೇ ಖುದ್ದಾಗಿ ನನ್ನ ಕೂದಲನ್ನ ಬಾಚಿ,ಬಾಚಣಿಗೆಯನ್ನ ನಿನ್ ಬಾಯಲ್ಲಿಟ್ಟುಕೊಂಡು,ನನಗೆ ಜಡೆ ಹಾಕ್ತಾ ಇದ್ರೆ ಏನ್ ಹಿತ ಅನ್ಸುತ್ತೆ ಗೊತ್ತಾ..?
ಮದುವೆಗೆ ಹೋಗಬೇಕಾದ್ರೆ "ಸೀರೆ ಉಟ್ಕೋ" ಅಂತ ನೀನು, "ಸೀರೆ ಉಟ್ಕೊಳ್ಳೋಕೆ ಬರಲ್ಲ ಚೂಡಿ ಹಾಕೊಳ್ತಿನಿ"ಅಂತ ನಾನು,  ಹಾಗಿದ್ರೆ "ನೀನ್ ಬರೋದ್ ಬೇಡ" ಅಂತ ನೀನು, "ಬರಲ್ಲ ಹೋಗೋ" ಅಂತ ನಾನು ಇಬ್ರು ಹೀಗೆ ಹಾವು ಮುಂಗುಸಿ ತರ ಕಚ್ಛಾಡ್ತಾ  ಎಷ್ಟು ತಮಾಷೆಯಾಗಿರತ್ತೆ ಗೊತ್ತಾ?ನೀನೇ ನನ್ನ ಕಾಡಿಬೇಡಿ ಸೀರೆ ಉಟ್ಕೋಳ್ಳೊಕೆ ಒಪ್ಪಿಸಿ ನೀನೇ ನನ್ಗೆ ಸೀರೆ ಉಡಿಸ್ತಾ ಇರೋವಾಗ ನೀನ್ ಕಷ್ಟಪಟ್ಟು ಉಡೋಸೋದನ್ನ ನೋಡಿ ನಾನ್ ನೀನ್ ಕೆನ್ನೆಗೆ ಪ್ರೀತಿಯಿಂದ ಮುತ್ತು ಕೊಡ್ತಾ ಇದ್ರೆ ಎಷ್ಟು ಚೆನ್ನಾಗಿರತ್ತೆ ಅಲ್ವಾ?ಕೊನೆಗೆ ನೀನೇ ಸೀರೆ ಉಡಿಸಿ "ನೋಡು ನಾನ್ ಎಷ್ಟು ಚೆನ್ನಾಗಿ ಸೀರೆ ಉಡಿಸ್ತೀನಿ" ಅಂತ ಹೇಳ್ತಿದ್ರೆ ಎಷ್ಟು ತಮಾಷೆಯಾಗಿರತ್ತೆ ಗೊತ್ತಾ?
ನೀನ್ ಮನೆಗೆ ಲೇಟಾಗಿ ಬಂದಾಗ, ನಾನು ನಿನ್ಮೇಲೆ ಕೋಪ ಮಾಡ್ಕೊಂಡು ಮಾತು ಆಡದೆ ಇದ್ರೆ ಎಷ್ಟು ಸುಖಾ ಅನ್ಸುತ್ತೆ ಗೊತ್ತಾ? 

Sorry ಕಣೇ ಅಂತ ನೀನ್ ಹತ್ರ ಬಂದಾಗ ಕೊರಳ್ ಪಟ್ಟಿ ಹಿಡಿದು ನಿನ್ನ ಚೆನ್ನಾಗ್ ಹೊಡೆದು ಆಮೇಲೆ ನಿನ್ನೆದೆಮೇಲೆ ಒರಗಿ ನಿನ್ನ ಗಟ್ಟಿಯಾಗಿ ಅಪ್ಕೊಂಡು ಇನ್ಮೇಲೆ ಲೇಟಾಗಿ ಬರಬಾರ್ದು ಅಂತ ಅಳೋದ್ರಲ್ಲಿ ಏಷ್ಟು ಸಮಾಧಾನ ಇರತ್ತೆ ಗೊತ್ತಾ?


ಯು2 ನೋಡ್ತೀನಿ ಅಂತಾ ನಾನು.. ಕ್ರಿಕೆಟ್ ನೋಡ್ತೀನಿ ಅಂತಾ ನೀನು.. ಹೀಗೆ ಇಬ್ರು ಹಂದಿ-ನಾಯಿಗಳ ಥರ ಕಚ್ಚಾಡ್ತಾ ಇದ್ರೆ ಎಷ್ಟು ಮಜಾ ಇರುತ್ತೆ ಗೊತ್ತಾ?


ಇಬ್ರು ಒಟ್ಟಿಗೆ ಬೈಕ್ನಲ್ಲಿ ಹೋಗ್ತಾ ಇರೋವಾಗ ನಾನ್ ನಿನ್ ಹಿಂದುಗಡೆ ಕುಳಿತುಕೊಂಡು ಬೇಕಂತ್ಲೆ ನಾನ್ ಹಾರಾಡೋ ಕೂದಲ್ನನ್ನ ನಿನ್ ಮುಖಕ್ಕೆ ರಂಗೋಲಿ ಬಿಡಿಸೊಹಾಗೆ
ತಾಕೋವಂತೆ ತಮಾಷೆ ಮಾಡ್ತಾ ಇದ್ರೆ ಏನ್ ಹಿತ ಅನ್ಸುತ್ತೆ ಗೊತ್ತಾ..?ಇಬ್ರು ತಾಜಮಹಲ್  ಎದ್ರು ನಿಂತು ಕೈ ಕೈ ಹಿಡ್ಕೊಂಡು ನೀನು "ನೀ ಅಮೃತಧಾರೆ" ಅಂತ  ನಾನು " ಹೇ ಪ್ರೀತಿ ಹುಡುಗ" ಅಂತ ಡ್ಯೂಯೇಟ್ ಸಾಂಗ್ ಹಾಡ್ತಾ ಇದ್ರೆ ಎಷ್ಟು romantic ಆಗಿರುತ್ತೆ ಗೊತ್ತಾ?ನಾನು ಅಡುಗೆ ಮನೇಲಿ ಒಬ್ಬಳೇ ಇರ್ಬೇಕಾದ್ರೆ ಹಿಂದಿನಿಂದ ನೀನ್ ಬಂದು ಹೆದರಸಿದ್ರೆ ಎಷ್ಟು thrill ಇರುತ್ತೆ ಗೊತ್ತಾ?


ನೀನ್ ಆಪೀಸ್ ನಲ್ಲಿ ಬ್ಯೂಸಿ ಇದ್ಡಾಗ ನಾನು ಮತ್ತೆ ಮತ್ತೆ ಕಾಲ್ ಮಾಡಿ ನಿನ್ಗೆ ಸಿಟ್ಟು ಬರೋ ಹಾಗೆ ಮಾಡೋದ್ರಲ್ಲಿ ಏನ್ ಖುಷಿ ಇರತ್ತೆ ಗೊತ್ತಾ?


ನೀನೆ ಪ್ರೀತಿಯಿಂದ ಗೆಜ್ಜೆ ತಂದು ತೋಡಿಸ್ತಾ ಇದ್ರೆ ಎಷ್ಟು ಖುಷಿಯಾಗಿರತ್ತೆ ಗೊತ್ತಾ?ನನ್ಗೆ ಹುಷಾರಿಲ್ಲ ಅಂತ ನನ್ನೆಲ್ಲಾ ಕೆಲ್ಸನೂ ನೀನೇ ಮಾಡ್ತಾ ಪ್ರೀತಿಯಿಂದ ನನ್ನ ಬಗ್ಗೆ ಕೇರ್ ತಗೋಳ್ತಿದ್ರೆ ಎಷ್ಟು ಸಂತೋಷ ಆಗತ್ತೆ ಗೊತ್ತಾ?
t.v. ನಲ್ಲಿ ಬರೋ ಸೆಕ್ಸಿ ಹಿಯೋಯಿನನ ಬಾಯ್  ಬಿಟ್ಕೊಂಡು ನೀನ್ ನೋಡ್ತಿರಬೇಕಾದ್ರೆ ಸೌಟ್ ನಿಂದಾ ನಾನ್ ನಿನ್ನ ಹೋಡಿತಾ ಇದ್ರೆ ಎಷ್ಟು ಮಜಾ ಇರತ್ತೆ ಗೊತ್ತಾ?ಯಾವುದೋ ಕಾರಣಕ್ಕೆ 2 ದಿನ ಇಬ್ರು ಮಾತು ಬಿಟ್ಟು ಆಮೇಲೆ ಒಬ್ಬರ್ನೋಬ್ರು ತಬ್ಬಿಕೊಂಡು ಗೊಳೋ ಅಂತಾ ಅಳೋದ್ರಲ್ಲಿ ಎಷ್ಟು ಹಿತ ಇರತ್ತೆ ಗೊತ್ತಾ?
ಯಾವಾಗ್ಲೂ ನಾವಿಬ್ಬರೂ I Love You.... I Love You  ಅಂತ ಬಬ್ರಿಗೊಬ್ಬರು ಹೇಳ್ಕೊಳ್ತಾ ಇದ್ರೆ ಎಷ್ಟು ಖುಷಿ ಅನ್ಸುತ್ತೆ ಗೊತ್ತಾ?

3 comments:

 1. ಹಾಯ್
  ಮೆಡಂ ನಿಮ್ಮ ಲೇಖನ [ತರ ತರ ಹಿಡಿಸಿದೆ ಮನಸಿಗೆ ನೀನು ... ಹಗಲಲೇ ಮುಳುಗಿದೆ ಕನಸಲಿ ನಾನು] ಓದುತ್ತ
  ಹೊಗುತ್ತಿದ್ದಂತೆ ನಾನೇ ಸ್ವತಃ ಅದರಲ್ಲಿ ಇದ್ದಂತೆ ಭಾಸವಾಯ್ತು.
  ತುಂಭಾ ಸೊಗಸಾದ ,ಲವಲವಿಕೆ ಲೇಖನ ನಿಮ್ಮ ಎಲ್ಲಾ ಲೇಖನ
  ಓದಿ ಅಭಿಪ್ರಾಯಿಸುವೆ ,ನಂಗೆ ನಿಮ್ಮ ಬ್ಲಾಗ್ ತುಂಭಾ ಹಿಡಿಸಿತು.

  ReplyDelete
 2. ನಿಮ್ಮ ಬ್ಲಾಗ್ ಚೆನ್ನಾಗಿದೆ. ಇನ್ನೂ ಹೆಚ್ಚಾಗಿ ಬರೆಯಿರಿ.

  ReplyDelete
 3. ಹಾಯ್ ನಿಮ್ಮ ಬ್ಲಾಗ್ ತುಂಬಾ ಇಷ್ಟ ಆಯಿತು...
  ತುಂಬಾ ಚೆನ್ನಾಗಿ ನವಿರು ಭಾವಗಳನ್ನು ಪೋಣಿಸಿದ್ದಿರಿ...
  ಮತ್ತಷ್ಟು ಮಗದಷ್ಟು ಬರೆಯಿರಿ..

  ReplyDelete