Sunday, July 10, 2011

♥ ♥ ♥ ♥ ♥ ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ ♥ ♥ ♥ ♥ ♥

ಅಂದು ತಣ್ಣನೆಯ ಗಾಳಿಗೆ ಮೈಯೊಡ್ಡಿ ನಿಂತಾಗ ನನಗರಿವಲ್ಲದಂತೆಯೇ ಮುಂಗುರುಳ ಸರಿಸಿ ಹಣೆಗೆ ಮುತ್ತಿಟ್ಟು ಹೋದ ಪ್ರಿಯಕರ ನೀನಲ್ಲವೇ? ಇರುಳಿಡೀ ಈ ಚುಮು ಚುಮು ಚಳಿಗೆ ಚಾದರ ಹೊದ್ದು ಮಲಗಿ ನಿದ್ದೆ ಹೋಗುವಾಗ ಅಂದಿನ ನಿನ್ನ ಸಿಹಿ ಮುತ್ತಿನ ನಿರೀಕ್ಷೆಗೆ ಮನ ಮಿಡಿಯುತ್ತದೆ. ಬೆಳಗ್ಗೆ ಎದ್ದು ಕೂತೆನೆಂದರೇ ರಾತ್ರಿ ಕನವರಿಸಿದ ನಿನ್ನ ಮಲ್ಲಿಗೆ ನೆನಪುಗಳ ಸರಮಾಲೆ ಮತ್ತೆ ಮತ್ತೆ ಕಾಡತೊಡಗುತ್ತದೆ . ನಿನ್ನ ಜೊತೆಗಿದ್ದ ಸಮಯ,ಹಂಚಿಕೊಂಡ ಖುಷಿಯ, ಮರೆಯಲು ಸಾಧ್ಯವೇ ? ಸದಾ ಕಾಲ ನೆನೆಯುವುದು ನನ್ನ ಈ ಪುಟ್ಟ ಹೃದಯ. ನೀನು ಎಲ್ಲೇ ಇರು ಆದರೆ ನನ್ನ ಮನಸ್ಸಿನಲ್ಲಿ ನೀನೆಂದೂ ಇದ್ದೇ ಇರುತ್ತಿಯ...ಹೇಳುತ್ತಾರಲ್ಲ ...ಹೃದಯ ಕನ್ನಡಿ ಇದ್ದಂತೆ ...ಹೇಗೆ ಕನ್ನೆಡಿ ಒಡೆದಾಗ ಪ್ರತೀ ಚೂರಿನಲ್ಲೂ ಮುಖ ಕಾಣಿಸುತ್ತದೋ ಹಾಗೆ ನನ್ನ ಹೃದಯದ ಪ್ರತೀ ಚೂರಿನಲ್ಲೂ ನಿನ್ನ ಮುಖವೇ ಕಾಣಿಸುತ್ತದೆ. ನೀನು ಅಂದಿನಿಂದ ಇಂದಿನವರೆಗೂ ಕಳಿಸಿದ ಎಲ್ಲಾ ಪುಟಾಣಿ ಎಸ್ಸೆಮ್ಮೆಸ್ಸುಗಳು ನನ್ನ ಮೊಬೈಲಿನ ಬೆಚ್ಚಗೆ ಕುಳಿತಿದೆ. ನಿನ್ನ ನೆನಪಾದತಕ್ಷಣ ದಿನಕ್ಕದೆಷ್ಟು ಬಾರಿ ತೆರೆದು ಓದುತ್ತೇನೋ ನನಗೇ ತಿಳಿಯುತ್ತಿಲ್ಲ. 

ನೀನೆಂದಿಗೂ ನನಗೆ ಮಗುವಿನಂತೆ. ನಿನಗೆ ಗೊತ್ತಾ ನಮ್ಮನ್ನು ದೂರ ಮಾಡಲು "ದೊಡ್ಡ ಕಾರಣಬೇಕು" ಆದರೆ, ನಾವಿಬ್ಬರೂ ಸನಿಹ ಸೇರಲು "ಸಣ್ಣ ನೆಪ ಸಾಕು".

ನೀ ಎದುರಿದ್ಡಾಗ ಏನು ಮಾತನಾಡದ ಹಾಗೆ ನಿನ್ನೆದೆಗೆ ಒರಗಿ ಹಾಗೆ ಕಣ್ಮುಚ್ಚಿ ನಿನ್ನ ಅಪ್ಪಿಕೊಂಡು ಈ ಲೋಕವ ಮರೆತು ಎದೆಯೊಳಗಿನ ನೋವ ಹಾಗೆ ನುಂಗಿ ಕೊಂಡು ನಿನ್ನ ಕಂಡ ಕ್ಷಣ ಬಾರದ ನಗುವ ತುಟಿಯಲಿ ತಂದು ಕೊಂಡು ಸುಮ್ಮನೆ ಹಾಗೆ ನಾನೇ ಬಚ್ಚಿಟ್ಟು ಕೊಳ್ಳುವುದು ಏಕೆ ?

ಆಡುವ ಮಾತುಗಳು ನೂರಿದ್ದರೂ ನಿನ್ನ ಕಂಡಾಗ ನಾ ಮೂಕವಾಗುವುದೇಕೆ? ಜಾರಿ ಹೋಗುವ ಕಣ್ಣೀರು ಕೂಡ ನಿನ್ನ ಕಂಡ ಕ್ಷಣ ಹಾಗೆ ನಿಲ್ಲುವುದೇಕೆ? ಚಿಂತೆಗಳ ಸಂತೆಯಲಿ ಇದ್ದರೂ ನಿನ್ನ ಕಂಡೊಡನೆ ಮೊಗದಲಿ ಮಂದ ಹಾಸ ಮೂಡುವುದೇಕೆ?
ಇದ್ದಾಗ ಕಾಡದ ಭಾವನೆಗಳು ನೀ ಕಾಣದೆ ಹೋದಾಗ ಆ ರೀತಿ ಕಾಡುವುದೇಕೆ?

ಎದುರಿನಲ್ಲಿ ಘಂಟೆಗಟ್ಟಲೆ ನೀನಿದ್ದರೂ ನಾ ಮಾತಾಡಲು ತಡವರಿಸುವುದೇಕೆ? ಹತ್ತು ಜನ್ಮ ಎತ್ತಿದರೂ ನಿನ್ನ ಜೊತೆಯಲ್ಲೇ ಇರಬೇಕು ಅನ್ನೋ ಆಸೆ ಏಕೆ? ಹಗಲಿನಲಿ ನಿನ್ನೊಡನೆ ಇದ್ದರೂ ಇರುಳಿನಲಿ ನಿನ್ನ ನೆನಪಲಿ ಕನವರಿಸುವುದೇಕೆ? ಬಂಧುಬಳಗದವರೆಲ್ಲರೂ ಜೊತೆ ಇದ್ದರೂ ಇಲ್ಲದ ನಿನ್ನ ನಾ ಹುಡುಕುವುದೇಕೆ ?

ನಿನ್ನ ಜೊತೆ ನಾನು ಆಡಿರುವ ಮಾತುಗಳ ತೂಕ ಒಂದು ತೂಕವಾದರೆ ಆಡದೆ ಉಳಿಸಿಕೊಂಡ ಮಾತುಗಳ ತಕ್ಕಡಿಯ ತೂಕ ಹೆಚ್ಚು ತೂಗುತ್ತದೆ. ಮತ್ತೆ ನಿನ್ನ ನೋಡೋ ದಿನ ಅದೆಷ್ಟು  ಬೇಗ ಬರತ್ತೋ....  ನಿನ್ನ ಎದೆಯ ಮೇಲೆ ತಲೆಯಿಟ್ಟು  ತೋಳ ತೆಕ್ಕೆಯಲ್ಲಿ ಮತ್ತೆ ನಾ ಬಂದಿಯಗಬೇಕು ಅನ್ನಿಸ್ತಿದೆ.

ಆ  ದಿನ, ಹರಿವ ಝರಿಯ ತಟದಲ್ಲಿ, ಮೌನವಾಗಿ ನಿನ್ನೊ೦ದಿಗೆ ಕುಳಿತು, ಹಕ್ಕಿಗಳ ಚಿಲಿಪಿಲಿ ಕೇಳುವಾಸೆ...


ನಿನ್ನ ಹೆಗಲಮೇಲೆ ತಲೆಯಿಟ್ಟು ನಿನಗೊ೦ದು ಕವನ ಬರೆಯುವಾಸೆ.....

ನಿನ್ನೆದೆಯ ಉಸಿರ ಜಾಡಿನಲ್ಲಿ ಹಾಗೇ ಬೆಚ್ಚಗೆ ಕನಸುಗಳನ್ನು ಹರಡಿ ಬಿಡುವಾಸೆ.

ಗಿರಿಯ ತುದಿಯಲಿ ನಿನ್ನೊ೦ದಿಗೆ ನಿ೦ತು, ನಿನ್ನ ಹೆಸರಿಟ್ಟು "I Love U" ಅ೦ತ ಪ್ರತಿಧ್ವನಿಸೋ ನನ್ನ ಸ್ವರ ಕೇಳುವಾಸೆ....

ಭೋರ್ಗರೆವ ಸಾಗರದ೦ಚಲಿ, ನಿನ್ನ ಹೆಸರ ಜೊತೆ ನನ್ನ ಹೆಸರ ಕೂಡಿಸಿ ಬರೆಯುವ ಆಸೆ..


ನನ್ನೆಲ್ಲಾ ನೋವನ್ನು ನಿನ್ನೆದೆಯ ಉಸಿರ ಜಾಡಿನಲ್ಲಿ ಹರಡಿಬಿಡುವಾಸೆ

ಆ ನಿನ್ನ ನಿಡುದಾದ ಉಸಿರಿನ ತಂಗಾಳಿಯಲ್ಲಿ ನಿನ್ನಂತರ್ಯದ ಬೆಳಕಬಿಂಬ ಕಾಣುವಾಸೆ
ಆ ತು೦ತುರು ಮಳೆಯಲ್ಲಿ ಮೂಡಿರೊ ಕಾಮನ ಬಿಲ್ಲಡಿ ನಿ೦ತು, ಅದೇ ಬಣ್ಣ ಕದ್ದು, ನಮ್ಮ ಮು೦ದಿನ ಜೀವನದಲ್ಲಿ ತು೦ಬಿಕೊಳ್ಳೊ ಆಸೆ...

ಈ ಮಳೆಗಾಲದ ಚುಮುಗುಡೋ ಚಳಿಯಲ್ಲಿ, ಒ೦ದೇ ಕೊಡೆಯಡಿಯಲ್ಲಿ ಅರ್ಧ ನೆನೆಯುತ್ತ ನಿನ್ನೊಂದಿಗೆ ನಡೆಯೋ ಆಸೆ....

ನಿನ್ನೆದೆಯ ಕಣ್ಣ ತೆರೆದು ಒಂದು ಕ್ಷಣ ನಿಟ್ಟುಸಿರು ಬಿಟ್ಟುಬಿಡು. ಆ ಉಸಿರ ಜಾಡಿನಲ್ಲಿ ಕಂಗಳ ಹನಿಬಿಂದುವನ್ನು ಹಾಗೇ ಹರಿಯಬಿಡುವೆ.ನೀನು ಇಷ್ಟಪಡುವುದಾದರೆ! ನಿನ್ನೆದೆಯ ಹೊರತು ಅದಕ್ಕೆಲ್ಲಿದೆ ಜಾಗ? ಮೌನವಾಗಿ ನೆಲವ ತಬ್ಬುವ ಮೊದಲು ಭಾವಕೊಡು ಈ ಬಿಂಬಗಳಿಗೆ, ಜೀವ ಕೊಡು....

1 comment:

  1. hai madam how r u. i like ur wrtiting n feelings. yake hosa bhavane galige banna haccho kelasa madthilva tumba chennagi barithira yagalu barithiri happy weekend bye

    ReplyDelete