Saturday, May 28, 2011

♥ ಕೊಡು ಕೊಡು ವರವನು ಭಗವಂತ .... ಕೊಡು ಕೊಡು ಇವನನು ನನಗಂತ.... ನನಗಾಗಿ ಜನಿಸಿದ ಹುಡುಗ ಇವನೇ ತಾನೇ ♥


ಅಂದು ಮುದ್ದು-ಮುದ್ದಾಗಿ ಪೆದ್ದು ಪೆದ್ದಾಗಿ ನನ್ನ ಕಣ್ಣುಗಳನ್ನು ಕಿತ್ತು ತಿಂದು ಬಿಡುವ ಹಾಗೆ ನೋಡುತ್ತಾ ನನ್ನ ಮಡಿಲಲ್ಲಿ ಬಂದು ಮಲಗಿದ್ದನ್ನು ಯಾಕೋ ಮರೆಯೋಕಾಗ್ತಿಲ್ಲ ನಾ ಪ್ರಕೃತಿಯ ಮಡಿಲಲ್ಲಿ ನೀ ನನ್ನ ಮಡಿಲಲ್ಲಿ ಪ್ರೀತಿಯೆ ತುಂಬಿರಲು ನಮ್ಮ ಕಂಗಳಲಿ ಬೇರೇನು ಬೇಕು ಹೇಳು. ಅಂದು ನಿನ್ನೆದೆಗೆ ನನ್ನ ತಲೆಯಿಟ್ಟು ಮಲಗಿದ್ದಾಗ  ನಿನ್ನ ತುಂಟ ಹೃದಯ ಇದೆಯಲ್ವಾ, ಅದು ನನ್ನ ಏನೋ ಕೇಳಿದಂತಿತ್ತು.  ಆ ದಿನವೆಲ್ಲಾ ನನ್ನ ಕೈಯೊಳಗೆ ನಿನ್ನ ಕೈಯನಿಟ್ಟು, ನಿನ್ನ ಎದೆ ಮೇಲೆ ನನ್ನ ಮುಖ ಇರಿಸಿ ಜಗತ್ತನ್ನೇ ಮರೆತಿದ್ದೆ ಎಂದರೆ ತಪ್ಫಾಗಲಾರದು. ಸುಮ್ಮನೆ ನಿನ್ನ ಭುಜಕ್ಕೆ ತಲೆಯಿಟ್ಟು ಮಲಗಿ ಹಾಯೆನಿಸುವ ಆ ಅಲೌಕಿಕ ಅನುಭೂತಿ ಬಹುಷಃ ಪ್ರೀತಿಯೇನೋ! ನನ್ನ ಸ೦ಕುಚಿತ ಮನೋಭಾವವನ್ನು ದೂರಗೊಳಿಸಿದ ನಿನ್ನ ಬೌದ್ದಿಕತೆ ಪ್ರೀತಿಯ ಮತ್ತೊ೦ದು ಸ್ವರೂಪವೋ ಎನೋ ತಿಳಿಯುತ್ತಿಲ್ಲ. ಅಂದಿನ ನಿನ್ನ ಹಿತವಾದ ಸನಿಹ ಅದೆಂತಹ ಮಧುರ ಕ್ಷಣಗಳು ನಮ್ಮಿಬ್ಬರ ಮನ ತುಂಬಿತ್ತು . 


ಆದರೂ ನಾನು ನನ್ನವನನ್ನು ಸುಮ್ಮ ಸುಮ್ಮನೆ ಅನುಮಾನಿಸುತ್ತೇನೆ. ಅನುಮಾನವೆಂದರೆ ಅದು ಅನುಮಾನವೂ ಅಲ್ಲ. ಚಿಕ್ಕ ಅಸಹನೆ. ಅವನು ಯಾರೊಂದಿಗೂ ಮಾತನಾಡಬಾರದು. ಹುಡುಗಿಯರ ಮಾತು ಹಾಗಿರಲಿ, ಗೆಳೆಯರೊಂದಿಗೂ ತುಂಬ ಹೊತ್ತು ಮಾತಾಡಬಾರದು. ಅವರೊಂದಿಗೆ ಕುಳಿತು ಹರಟುವ ಅಷ್ಟು ನಿಮಿಷದ ಹೊತ್ತು ನನ್ನ ಮರೆತು ಬಿಟ್ಟಿರುತ್ತಾನಲ್ಲ ಅನ್ನೋ ಆತಂಕ. ಹೇಗೆ ಹೇಳಲಿ ಅವನಿಗೆ? ನಿನ್ನ ಪ್ರತಿ ಉಸಿರಿನಲ್ಲೂ ನಾನಿರಬೇಕು, ನಿನ್ನ ಪ್ರತಿ ಕದಲಿಕೆ ನನ್ನ ಅಣತಿಯಾಗಿರಬೇಕು, ನೀನಿಲ್ಲದೆ ನನ್ನ ಅಸ್ತಿತ್ವವಿಲ್ಲವೆಂಬುದನ್ನ. 


ನೀನು ನನ್ನ ಹಣೆಗೊಂದು ಸಿಹಿ ಮುತ್ತನ್ನಿಟ್ಟು ಎಷ್ಟು ದಿನಗಳಾಯ್ತು? ಮತ್ತೆ ನಿನ್ನೊಂದಿಗೆ ಕುಳಿತು ಕನಸು ಕಟ್ಟಲು ಮನಸ್ಸು ಹಾತೊರೆಯುತ್ತದೆ. ನೀ ಬರುವ ದಿನಗಳನ್ನು ನೆನೆಸುತ್ತಾ ಆ ದಿನಗಳನ್ನು ಕಳೆಯುವದರಲ್ಲೂ ಒಂಥರಾ ಖುಷಿ ಇದೆ ಗೊತ್ತಾ? ಹೇಳು, ಮತ್ಯಾವಾಗ ಬರ್ತಿಯಾ…ನಿನ್ನವಳ ನೋಡಲು? ನನ್ನ ಹಣೆಗೆ ಮುತ್ತನಿಡಲು? ನಿನ್ನ ಬಾಹುಗಳಲಿ ನನ್ನ ತುಂಬಿಕೊಳ್ಳಲು? ನೀನು ನನಗೆಂದಿಗೂ ಮಗುವಿನಂತೆ, ನೀನು ರೇಗಿದರು, ಬೈದರೂ ನಾನು ಕೋಪಿಸಿಕೊಂಡರೂ ಅದು ಆ ಕ್ಷಣಕ್ಕೆ, ಮತ್ತೆ ಮರಳಿ ನಿನ್ನಲ್ಲಿಗೆ ಬರುತ್ತೇನೆ. ಆದದ್ದನು ಮರೆತಿರುತ್ತೇನೆ. 

1 comment: