Thursday, December 23, 2010

ನನ್ನ ಮದುವೆಗೆ ನೀ ಬರಬೇಡ ಕಣೋ........

ಬರಿ ಕಣ್ಣುಗಳಿಗೆ ಸುಂದರ ಕನಸು ತುಂಬಿದವನು ನೀನು..ಕಾಲಿ ಹೃದಯಕ್ಕೆ ಪ್ರೀತಿ ಕಿಚ್ಚು ಹಚ್ಚಿದವನು ನೀನು..ಯಾವತ್ತು ಕಾಣದ ಸಂತೋಷ ಅಂದು ನಾ ಕಂಡೆ ನಿನ್ನಿಂದ...ಬರಿ ಮಾತಿನಲ್ಲಿ ವಿವರಿಸಲಾರೆ ಅ ನಿನ್ನ ನಗುವಿನ ಮಹಿಮೇಯನ್ನು..ನನಗರಿವಿಲ್ಲದೆ ನಾ ಸೋತಿದ್ದೆ ಅ ನಿನ್ನ ತುಂಟ ನಗುವಿಗೇ,,,ನಿನ್ನ ನಗುವಿನ ಬಗ್ಗೆ ಇಷ್ಟೆಲ್ಲ ಬರೆದಿದ್ದೇನಲ್ಲ ಅ ನಗುವಿನ ಸವಿಯನ್ನು ನನ್ನ ಕಣ್ಣುಗಳು ಸಹ ಅನುಭವಿಸಲಿಲ್ಲ... ಏನು ಹುಚ್ಚಿ ಅಂದ್ಕೊಡಿಯಾ ಹೌದು,,,,,ಪ್ರತಿದಿನ ನಿನ್ನ ಕನಸು ಕಾಣುತಿದ್ದ ಅಂದೇ ನನ್ನ ಹೃದಯ ನಿನಗಾಗಿ ಮಿಡಿಯಿತು ನನ್ನ ಮನಸು ನಿನ್ನ ಪ್ರೀತಿಗೆ ಸೋತಿತ್ತು ನನ್ನ ಕಣ್ಣು ನಿನ್ನ ನಗುವಿಗಾಗಿ ಕಾದಿತ್ತು ಇಷ್ಟು ಸಾಕಲ್ವ ನಿನ್ನ ಬಗ್ಗೆ ವಿವರಿಸಲು..ಏನಾಗಿತ್ತು ಅಂದು ನನಗೇ......ಅರ್ಥವಾಗಲಿಲ್ಲ ನನಗರಿವಿಲ್ಲದೆ ನಿನ್ನನು ಪ್ರತಿನಿಮಿಷ ನೋಡುವ ತವಕ ಮಾತಾಡುವ ಹಂಬಲ ಯಾಕೆ ಅಂತ ಉತ್ತರ ಹುಡುಕಿ ಹುಡುಕಿ ಸೋತು ಹೋಗಿದ್ದೆ

ಈಗಿಗ ದಿನವಿಡೀ ನಿನ್ಜೊತೆ ಮಾತಾಡ್ತಾ ಇರ್ಬೇಕು ಅನ್ಸತ್ತೆ. ಆದರೆ ನಿನಗೆ ಯಾಕೋ ಹಾಗನ್ನಿಸುತ್ತಿಲ್ಲ? ನಾನು ಎನೆಂದು ಅರ್ಥಮಾಡಿಕೊಳ್ಳಲಿ? ನಿನ್ನ ಮಾತು ದಿನವಿದ್ದ ಹಾಗೆ ದಿನವಿಲ್ಲ ಅನ್ನುವ ಹಾಗಿದೆ. ಇವತ್ತೊಂದು ಮಾತು ಹೇಳಿದರೆ ನಾಳೆ ಇನ್ನೊಂದು ಮಾತಾಡುತ್ತೀಯಾ ಏನು ಅಂತ ತಿಳಿಯಲಿ? ನೀನೆ ನನ್ನ ಜೀವ ಅನ್ನುತ್ತೀಯಾ ಇನ್ನೊಂದು ದಿನ ಈ ನಿನ್ನ ಜೀವನವನ್ನು ಇನ್ನೊಬ್ಬರ ಕೈಗಿಡು, ನಿನಗೆ ಒಳ್ಳೆಯದಾಗಬೇಕು ನಿನ್ನ ಪ್ರೀತಿಯಿಂದ ನೋಡಿಕೊಳ್ಳೊರನ್ನು ಮದುವೆಯಾಗಿ ಚೆನ್ನಾಗಿರು, "ಎಲ್ಲೇ ಇರು ಹೇಗೆ ಇರು ನನ್ನ ಆಶಯ ಇಷ್ಟೇ ನೀ ಸುಖವಾಗಿರು" ಅನ್ನುತೀಯ.

ಅರಿಯಲಾರೆ ನಿನ್ನ ಮಾತನ್ನ
ತಿಳಿಯಲಾರೆ ನಿನ್ನ ಮನಸ್ಸನ್ನ

ಯಾಕೆ ನೀನು ನನಗೆ ಮಿಸ್ ಕಾಲ್ ಮಾಡೋದಿಲ್ಲ ಅನ್ನುತ್ತಿಯಾ ಎಷ್ಟೋ ಸಾರಿ ಮಿಸ್ ಕಾಲ್ ಮಾಡಿದ್ರೆ ಕಾಲ್  ಕಟ್ ಮಾಡಿ ನಿರಾಸೆ ಮಾಡುತ್ತಿಯ. ಯಾಕೆ ಕಾಲ್ ಕಟ್  ಮಾಡಿದ್ದು ಅಂತ ಕೇಳಿದ್ರೆ ನಾನು ಬ್ಯುಸಿ ಇದ್ದೀದ್ದೆ ಅಂತಿಯಾ. ಆದರೆ ನೀನು ಬ್ಯುಸಿ ಇದ್ದಾಗ ಬೇರೆ ಯಾರೆ ಫೋನ್ ಮಾಡಿದರೆ ಗಂಟೆ ಗಟ್ಟಲೆ ಮಾತಾಡುತ್ತೀಯಾ. ಇದೇನು ನಾನು ಬೇಜಾರು ಮಾಡಿಕೊಳ್ಳೊದಿಲ್ಲ ಅನ್ನೋ ನಂಬಿಕೆನಾ ಅಥವಾ ನನ್ನ ಬಗ್ಗೆ ತಿರಸ್ಕಾರನೋ ಗೊತ್ತಾಗ್ತಿಲ್ಲ.

ಕೆಲವೊಮ್ಮೆ ಏನೋನೋ ಮಾತಾಡುತ್ತಿಯಾ, ನಿಜ ಹೇಳು ನಾನು ಮದುವೆಯಾಗೋದು ನಿನ್ಗಿಷ್ಟನಾ? ನಿನ್ನ ಮನಸಿಂದ ಉತ್ತರ ಕೊಡು. ನಿಜವಾದ ಪ್ರೀತಿಗೆ ಹೇಳಲಾಗದಷ್ಟು ಸ್ವಾರ್ಥ ಇರತ್ತೆ ಅಂತಾರಲ್ಲ ಹಾಗಾದ್ರೆ ಅದು ಸುಳ್ಳಾ?...  ಅಥವಾ ನೀ ನನ್ನ ಪ್ರೀತಿಸುವುದೇ ಸುಳ್ಳಾ....? ಅಲ್ಲ ಕಣೋ ನಿನಗೆ ಹೀಗೆಲ್ಲಾ ಹೇಳಲು ಹೇಗೆ ಮನಸ್ಸು ಬರತ್ತೆ?  ನಿನ್ನ ಬಿಟ್ಟು ಹೇಗೆ ಹೋಗಲಿ? ನಿನ್ನ ಹೇಗೆ ಮರೆಯಲಿ? ಏನೆಂದು ಅರ್ಥೈಸಲಿ ನಿನ್ನ? ನಿನ್ನನ್ನು ಎನೂಂತ ಕರೆಯಲಿ ನೆಚ್ಚಿನ ಬಂಧುನಾ, ಪ್ರಿಯಕರನ, ಅಥವಾ ಹಿತೈಷಿನ. ಏನೇ ಆಗಿರು ಆದರೆ ನಾನು ಉಸಿರಾಡೋದನ್ನ ನಿಲ್ಲಿಸೋತನಕ ನಿನ್ನನ್ನೇ ಆರಾಧಿಸುವೆ ಪ್ರೀತಿಸುವೆ. ನನ್ನ ಹ್ರದಯಕ್ಕೆ ಪ್ರಾಣ ಇರೋ ತನಕ ಈ ಹ್ರದಯದಲ್ಲಿರೋ ಜಾಗ ನಿನಗಾಗಿ ಮಾತ್ರ ಅದನ್ನ ಯಾರಿಗೋ ಬಿಟ್ಟು ಕೋಡಲಾಗುದಿಲ್ಲ ಆದ್ರೆ ನನ್ನದೊಂದು ಮಾತು ಬೇಜಾರ್ ಮಾಡಕೊಳ್ಳಬೇಡ ದಯವಿಟ್ಟು ನನ್ನ ಮದುವೆಗೆ ಬರಬೇಡ ಪ್ಲೀಸ್...  ಯಾಕೆಂದ್ರೆ ಅಂದು ಎಲ್ಲರೂ ಅಲ್ಲಿ ಮುಗಿಲು ಮುಟ್ಟುವ ಸಂಭ್ರಮದಲ್ಲಿರುತ್ತಾರೆ , ಅದರ ಮಧ್ಯೆ  ದುಃಖದಲ್ಲಿ ನಾನು, ಆ ಸಮಯದಲ್ಲಿ ನೀ ನನ್ನ ನೋಡುವುದು ಬೇಡ ಕಣೋ..ನಾ ಕನಸು ಕಂಡಂತೆ ಆ ದಿನ ನನ್ನ ಹೆಸರಿನೊಡನೆ ನಿನ್ನ ಹೆಸರಿನ ಫಲಕ ಇರುದಿಲ್ಲ ಬದಲಿಗೆ ಬೇರೇ ಯಾರದೋ ಹೆಸರಿರುತ್ತೇ ಅಲ್ವಾ?......ಆ ದಿನ ನೀ ನನ್ನ ಎದ್ರು ಬಂದ್ರೆ ನಗನಿಸಬಹುದು ನೀನೆ ನನಗೆ ತಾಳಿ ಕಟ್ಟಬಹುದಿತ್ತಲ್ಲವೆ? ನನ್ನ ಬಿಟ್ಟು ನಿನ್ಯಾಕೆ ಬೇರೆಯವರಿಗೆ ತಾಳಿ ಕಟ್ಟಿದ್ದು?  ಹೀಗೆ ನೂರಾರು ಭಾವನೆಗಳು ಮತ್ತೆ ನನ್ನ ಮನಸಿಗೆ ಬರಬಹುದು. ಆ ದಿನ ನನ್ನ ಮನದಲ್ಲಿ ಸ್ಮಶಾನದ ಮೌನವಡಗಿ, ಕಣ್ಣಲ್ಲಿ ನೀರು ಬಂದರು ಒತ್ತಿಟ್ಟು ಕುಳಿತಿರುವಾಗ ನೀ ಎದುರು ಬಂದರೆ ನಿಜವಾಗಲೂ ನಾನು ಅಲ್ಲೇ ಅತ್ತುಬಿಡುತ್ತೇನೆ ಅನ್ಸತ್ತೆ. ನೀನೇ ಯೋಚನೆ ಮಾಡು,ನೀ ನನ್ನ ಮದುವೆಗೆ ಬಂದರೆ ಏನಂತ ಹರಸುತ್ತಿಯಾ?ನಿನಗೆ ಹರಸೋಣ ಎಂದರೂ ಬಾಯಲ್ಲಿ ಮಾತುಗಳು ಹೊರಡತ್ತಾ?...ನೀನೇ ಹೇಳು,  ಒಂದು ವೇಳೆ ನೀನು ನನ್ನ ಮದುವೆಗೆ ಬಂದರೆ ಆ ಮದುವೆಯ ದಿನ ನನಗೆ ಮದುವೆಯ ದಿನ ಅನಿಸುವುದಿಲ್ಲ ಬದಲಾಗಿ ತಿಥಿಯ ದಿನ ಎಂದನಿಸುತ್ತದೆ . ಏಕೆಂದರೆ ಅಲ್ಲಿ ನಮ್ಮ ಪ್ರೀತಿಯ ಕೊಲೆ ನೆಡೆಯುತ್ತದೆ ಒಂದು ಸಾವು ಅದ ನಂತರ ಅಲ್ಲಿ ನೆಡೆಯುವುದು ತಿಥಿ ಮಾತ್ರ ಅಲ್ಲವೇ?

ಅಗಸ ನಿತ್ಯವು ಕಾಯುತ್ತದೆ ಸೂರ್ಯ ಚಂದ್ರರಿಗಾಗಿ ........ ತಾರೆಗಳೂ ಅಷ್ಟೇ ಕಾಯುತ್ತದೆ ನಿರಭ್ರ ರಾತ್ರಿಗಾಗಿ ...........
ನಾನು ಇನ್ನೆಲ್ಲಾ ಜನ್ಮದಲ್ಲೂ ಕಾಯುತ್ತಲೇ ಇರುವೇ ನಿನ್ನ ಪ್ರೀತಿಗಾಗಿ.........ನಿನ್ನ ಮನಸ್ಸಿಂದ ನನ್ನ ಪ್ರೀತಿಸುವೆ  ಅಂತ ನನಗೆ ಗೊತ್ತು . ಈ ಜನ್ಮದಲ್ಲಾಗದಿದ್ದರೂ ಇನ್ನೊಂದು ಜನ್ಮದಲ್ಲಾದ್ರೂ ನಿನ್ನ ಜೀವಕ್ಕೆ ಜೀವ, ಆತ್ಮಕ್ಕೆ ಆತ್ಮ, ಉಸಿರಿಗೆ ಉಸಿರಾಗುವ ಆಸೆ! 
ಇಂತಿ ನಿನ್ನ..
ಈ ಜನ್ಮದಲ್ಲಿ ನಿನ್ನವಳಲ್ಲದವಳು

7 comments:

  1. nimdu love failur ha?? eega maduve agideya?? nim ella postings awsome reeee.....

    ReplyDelete
    Replies
    1. thanks, hagenu illa, ha maduve agidhe prithi madidavra jothene!

      Delete
  2. medam yantha fell nemma huduga sekidhna avrajothy maduve aitha ellva

    mai romanchana vaguthy but nan love story gnpnaky baruthy .....i love naziya

    ReplyDelete
    Replies
    1. ಮನದ ಮೂಲೆಯಲ್ಲಿ ಅಡಗಿದ ಭಾವನೆಗಳಿಗೆ ಬರೆದ ಬರವಣಿಗೆ
      ಹೃದಯತಂಬಿದ ಪ್ರೀತಿಗೆ ಹೂ ಅಕ್ಷರಗಳ ಮೆರವಣಿಗೆ
      ಮನಸ್ಸಿನ ನೋವ್ವೀಗೆ ಹೃದಯದ ಗಾಯಕೆ ತಾಳ್ಮೆಯೆ ಪರಿಹಾರವೇ???

      Delete
    2. ಮನದ ಮೂಲೆಯಲ್ಲಿ ಅಡಗಿದ ಭಾವನೆಗಳಿಗೆ ಬರೆದ ಬರವಣಿಗೆ
      ಹೃದಯತಂಬಿದ ಪ್ರೀತಿಗೆ ಹೂ ಅಕ್ಷರಗಳ ಮೆರವಣಿಗೆ
      ಮನಸ್ಸಿನ ನೋವ್ವೀಗೆ ಹೃದಯದ ಗಾಯಕೆ ತಾಳ್ಮೆಯೆ ಪರಿಹಾರವೇ???

      Delete
    3. ಮನದ ಮೂಲೆಯಲ್ಲಿ ಅಡಗಿದ ಭಾವನೆಗಳಿಗೆ ಬರೆದ ಬರವಣಿಗೆ
      ಹೃದಯತಂಬಿದ ಪ್ರೀತಿಗೆ ಹೂ ಅಕ್ಷರಗಳ ಮೆರವಣಿಗೆ
      ಮನಸ್ಸಿನ ನೋವ್ವೀಗೆ ಹೃದಯದ ಗಾಯಕೆ ತಾಳ್ಮೆಯೆ ಪರಿಹಾರವೇ???

      Delete