Tuesday, December 28, 2010

ಅವನಿಗೆ ಬೇಡವಂತೆ ನೀನು !!!!!!

ಅವನು ಸಿಗುವುದಿಲ್ಲ ಮನಸೇ
ಏಕೆ ಸಿಗುವನೆಂಬ ಸುಳ್ಳು ನಂಬಿಕೆ?
ನಂಬಿದಂತೆ ಸಿಕ್ಕಿದ್ದರೂ....
ಅವನಿಗೆ ಬೇಡವಂತೆ ನೀನು!

ಅವನು ನೋಡುವುದಿಲ್ಲ ತಿರುಗಿ ಮನಸೇ
ಅದೆಷ್ಟು ವರುಷ ಅಲ್ಲೇ ನಿಲ್ಲುವೇ?
ತಿರುಗಿ ನಿನ್ನ ನೋಡಿದರೂ
ಅವನಿಗೆ ಬೇಡವಂತೆ ನೀನು!
ಅವನಿಗೆ ಎಲ್ಲಾ ಮರೇತುಹೋಗಿದೆ ಮನಸೇ
ನೀನದೆಷ್ಟು ನೆನಪಿಸುವೆ?
ಎಲ್ಲಾ ನೆನಪಾದರೂ....
ಅವನಿಗೆ ಬೇಡವಂತೆ ನೀನು!


ಅವನ ಮನಸಲ್ಲಿ ಜಾಗವಿಲ್ಲ ಮನಸೇ
ಇನ್ನೆಷ್ಟು ಬೇಡಿಕೊಳ್ಳುವೆ?
ಬೇಡಿ ಜಾಗವಿದ್ದರೂ....I
ಅವನಿಗೆ ಬೇಡವಂತೆ ನೀನು!


ಅವನ ಹೃದಯ ಕಲ್ಲಾಗಿದೆ ಮನಸೇ
ಏಕೆ ಕರಗಿಸುವ ಪ್ರಯತ್ನ ?
ಹೃದಯ ಕರಗಿದರೂ....
ಅವನಿಗೆ ಬೇಡವಂತೆ ನೀನು!


ಅವನಿಗೆ ನೀನು ಮುಗಿದ ಕಥೆ ಮನಸೇ
ಮುಂದುವರೆಸುವ ಆಸೆಯೆಕೆ?
ಕಥೆ ಮುಂದುವರೆಸಿದರೂ...
ಅವನಿಗೆ ಬೇಡವಂತೆ ನೀನು!ಅವನಿಗೆ ಪ್ರೀತಿ ಬೇಕಿಲ್ಲ ಮನಸೇ
ನೀನದೆಷ್ಟು ಪ್ರೀತಿಸುವೆ?
ನೀನೆಷ್ಟೇ ಪ್ರೀತಿಸಿದರೂ...
ಅವನಿಗೆ ಬೇಡವಂತೆ ನೀನು!

ಅವನಲ್ಲಿ ಬೆಲೆಯಿಲ್ಲ ನಿನ್ನ ಭಾವನೆಗೆ ಮನಸೇ
ಏಕೆ ಅವನಿಗಾಗಿ ಇಷ್ಟು ಪ್ರಾರ್ಥನೆ?
ಪ್ರಾರ್ಥನೆಗೆ ಬೆಲೆ ಕೊಟ್ಟರೂ....
ಅವನಿಗೆ ಬೇಡವಂತೆ ನೀನು!

ಅವನು ಚಂದ್ರ ನಿನ್ನ ಬಾಳಿಗೆ ಮನಸೇ
ಭೂಮಿಗೆ ಬರುವನೆಂಬ ಕನಸೇಕೆ?
ಬೆಳದಿಂಗಳಾಗಿ ಬಂದರೂ....
ಅವನಿಗೆ ಬೇಡವಂತೆ ನೀನು!

ಅವನನ್ನು ಮರೆತುಬಿಡು ಮನಸೇ
ಕಹಿಯ ನೆನಪುಗಳೇಕೆ?
ನೀನದೆಷ್ಟು ಕೊರಗಿದರು ಮರುಗಿದರು ಕಣ್ಣೀರಿಟ್ಟರೂ
ಅವನಿಗೆ ಬೇಡವಂತೆ ನೀನು!!!

2 comments: