Tuesday, October 5, 2010

ಕನಸಿನ ಕೂಸು ನನ್ನವನು

ನನ್ನ ಪ್ರೀತಿಯ ಮುದ್ದುಕೋತಿಗೆ,

ಹಲೋ.................!!!!

ಎಲ್ಲಿದ್ದಿಯಾ? ಹೇಗಿದ್ದಿಯಾ? ಹಾಗಂತ ನಾನ್ ನಿನ್ನ ಕೇಳಲ್ಲ ಯಾಕೆಂದ್ರೆ ನೀನು ನನ್ನ ಹಾರ್ಟ್ನಲ್ಲಿ ಇದ್ದಿಯಾ ಸೋ ನಂಗೊತ್ತು ಚೆನ್ನಾಗಿದ್ದೀಯಾ ಅಂತ. ನೀನು ನನ್ನ ಹಾರ್ಟ್ನಲ್ಲಿ ಇರೋ ತನಕ ಚೆನ್ನಾಗಿ ನೋಡಿಕೊಳ್ಳುವ ಜವಬ್ದಾರಿ ನನ್ನದು ಕಣೋ ಒಂದು ವೇಳೆ ನಾನು ಸತ್ತು ಹೋದ್ರೆ ಪ್ಲೀಸ್ ನನ್ನ ಹಾರ್ಟನ್ನು ಎತ್ತಿ ಇಡು ನಾನು ನನ್ನ ಬಗ್ಗೆ ಯೋಚಿಸ್ತಾ ಇಲ್ಲ ಅದರಲ್ಲಿ ಇರುವ ನಿನ್ನ ಬಗ್ಗೆ ಯೋಚನೆ ಮಾಡ್ತಾ ಇದೀನಿ. ಹಾಗಾಗಿ ಹಾರ್ಟ್ನಿಂದ ಹೊರಗಡೆ ಹೋಗುವ ಪ್ರಯತ್ನ ಮಾಡಬೇಡ ನನ್ ಜೇವಾನೆ ಹೋಗತ್ತೆ ಕಣೋ. ನಾನ್ ಬಯಸುದು ನಿನ್ನ ಪ್ರೀತಿನ. ಸಾಗರದ ಆಳದಷ್ಟು ನೀನ್ ನನ್ನ ಪ್ರೀತಿಸಬೇಕು. ಸಾಗರಗಳು ಬತ್ತೋ ತನಕ ನಮ್ ಪ್ರೀತಿ ದೀಪ ಉರಿಯಬೇಕು.

ನಿನ್ ನನ್ನ ಜೀವ ಅನ್ನೋ ಮಟ್ಟಿಗೆ ಪ್ರೀತಿಸ್ತಾ ಇದ್ದೀನಿ. ಪ್ರೀತ್ಸೋರು ಎಲ್ಲರೂ ಹೇಳ್ಕೋಳ್ತಾರೆ ನೀನು ನನ್ನ ಅದು-ಇದು ಅಂತೆಲ್ಲಾ ಆದ್ರೆ ನೀನು ನನ್ನ ಪ್ರತಿ ಮಿಡಿತ ಕಣೋ. ನಿನ್ನ ಜೊತೆ ಮಾತಾಡ್ತಾ ಇದ್ರೆ ಎನೋ ಒಂಥರಾ ಖುಷಿ ನಿನ್ಗೆ ನನ್ನ ಪ್ರೀತಿ ಅರ್ಥವಾಗತ್ತೋ ಇಲ್ವೋ ನಿನಂದ್ರೆ ನಂಗೆ ಮೊದ್ಲಿಂದ ತುಂಬಾ ಇಷ್ಟ ಕಣೋ. ನನಗೆ ಪ್ರಪಂಚದಲ್ಲಿ ಪ್ರೀತಿ ಅನ್ನೋದನ್ನ ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಟ್ಟವನೇ ನೀನು ಆದ್ರೆ.........ಆದ್ರೆ.......ಯಾವ ರೀತಿ ನನ್ನ್ ಪ್ರೀತಿನ ನಿಂಗೆ ಅರ್ಥ ಮಾಡಿಸ್ಲಿ. ಅರ್ಥ ಮಾಡಿಸೋ ಕಾಲ ಮುಗಿದು ಹೋಯ್ತು ಅನ್ನೋದು ಗೊತ್ತಿದ್ದು ನಾನ್ಯಾಕೆ ನಿನ್ನ ವಿಷಯದಲ್ಲಿ ಇಷ್ಟು ಸ್ವಾರ್ಥಿಯಾಗ್ತಾ ಇದೀನಿ ಅಂತಾನೂ ನನ್ಗೆ ಗೊತ್ತಾಗ್ತಾ ಇಲ್ಲ  

ಯಾವತ್ತು ಕೂಡ ಪ್ರೀತಿಯೆಂಬ ಮಾಯೆಯ ಬಲೆಗೆ ಸಿಕ್ಕಲೇಬಾರದು ಯಾಕೆಂದ್ರೆ ಅದರಿಂದ ಹೊರಗಡೆ ಬರೋದು ತುಂಬಾ ಕಷ್ಟ ಪ್ರೀತಿಲಿ ಬೀಳೊದು ಅಂದ್ರೆ ದೊಡ್ಡ ಸಾಗರಕ್ಕೆ ಬಿದ್ದಂತೆ ಕೆಲವರು ತಮಗೆ ಗೊತ್ತಾಗದೇ ಬಿಳ್ತಾರೆ ಅದು ಕಾಲ್ ಜಾರಿ ಬೀಳೊದು. ಇನ್ ಕೆಲವರು ಬೇಕಂತ್ಲೆ ಬಿಳ್ತಾರೆ ಪಾಪ ಅವ್ರಿಗೆ ಅದರ ಆಳದ ಪರಿಚಯ ಇರೋದಿಲ್ಲ ಆಮೇಲೆ ಗೊತ್ತಾಗತ್ತೆ ಅದು ತುಂಬಾ ಆಳ ಇದೆ ಅಂತ ಬಿದ್ದ ನಂತ್ರ ಹೇಗೆ ಮೇಲೆ ಬರೋದು ಅನ್ನೋದನ್ನ ಆಮೇಲೆ ಯೋಚಿಸ್ತಾರೆ. ಪ್ರೀತಿಗೆ ಬಿದ್ರೆ ದಡ ಸೇರೊದು ಅಷ್ಟೇ ಕಷ್ಟ ಕಡೇ ಪಕ್ಷ ಜೀವ ಊಳಿಸಿಕೊಳ್ಳುದು ಹೇಗೆ ಅಂತ ಗೊತ್ತಾಗಲ್ಲ. ನಾನ್ ಯಾವ ರೀತಿ ಬಿದ್ದಿರೊದು ಅಂತ ಗೊತ್ತಿಲ್ಲ ಆದ್ರೆ ಬಿದ್ದಿದ್ದಿನಿ ಅನ್ನ್ನೋದ್ ಮಾತ್ರ ಸತ್ಯ. ನೀನು ನನ್ನ ಬದುಕಿಸ್ತಿಯಾ ತ್ತು ದಡ ಸೇರಿಸ್ತಿಯಾ ಆನ್ನೋ ನಂಬಿಕೆ ನನ್ಗೆ ಇದೆ ಯಾಕೆಂದ್ರೆ ಈಗ ನಂಬಿಕೆನೇ ಜೀವನ ಅಂದ್ಕೊಂಡಿದ್ದೇನೆ.


ಎಲ್ಲರೂ ದೇವ್ರಲ್ಲಿ ಅದು ಬೇಕು, ಇದು ಬೇಕು ಅಂತ ಬೇಡ್ಕೋಳ್ತಾರೆ ಆದ್ರೆ ನಾನ್ ಮಾತ್ರ ನಿನ್ನ ಪ್ರೀತಿ ಬೇಕು ಅಂತ ಬೇಡ್ಕೋಳ್ತಿನಿ. ನಿನ್ನನ್ನ ನಾನ್ ಯಾಕೆ ಇಷ್ಟು ಪ್ರೀತಿಸ್ತಾ ಇದೀನೋ ಗೊತ್ತಿಲ್ಲ. ಒಂದೊಂದು ಸಲ ನನ್ಗನಿಸುತ್ತೆ ನಾನು ನಿನ್ನನ್ನು ನೆನೆದಾಗ ನೀನು ನನ್ನ ಎದ್ರು ಬರಬೇಕು ಅಂತ. ನನ್ನ ಮನಸ್ಸಲ್ಲಿ ನೂರಾರು ಚಿಂತೆ ಕಾಡ್ತಾ ಇದೆ . ಮನಸ್ಸು ಅನ್ನೋದು ತೋಳಲಾಟದಲ್ಲಿದೆ. ಹಾಗೊಂದು ವೇಳೆ ನೆನ್ಸಿಕೊಂಡಾಗೆಲ್ಲಾ ನಿನ್ ಎದ್ರು ಬಂದ್ರೆ ಬೇರೆಯಾರಾದ್ರು ನೆನ್ಸಿಕೊಂಡ್ರೆ............ಹಾಗೆಲ್ಲ ಬೇಡ ಬೇಡ ಯಾಕೆಂದ್ರೆ ನೀನು ನನ್ನ ಪ್ರೀತಿಗೆ ಮಾತ್ರ ಸ್ವಂತ ಆಗಬೇಕು. ಏಳು ಜನ್ಮದಲ್ಲೂ ಕೂಡ ಅಂದ್ರೆ ಇದು ನನ್ನ ಪ್ರಥಮ ಜನ್ಮ ಆಗಿದ್ರೆ ಜನ್ಮದಲ್ಲಿ ಕೊನೆವರೆಗೂ ನಿನ್ನ ಪ್ರೀತಿ ನನ್ಗೆ ಮಾತ್ರ ಸ್ವಂತ ಆಗಿರಬೇಕು ಇನ್ನುಳಿದ ಆರು ಜನ್ಮದಲ್ಲಿ ಪ್ರೀತಿ ತುಂಬಿರುವ ನೀನು ಯಾವತ್ತು ನನ್ನ ಜೊತೆಗೆ ಇರಬೇಕು. ಇದು ನನ್ನ ಸ್ವಾರ್ಥ ಅನ್ನೋದು ನನಗೆ ಗೊತ್ತು ಕಣೋ ಪ್ರಪಂಚ ತುಂಬಾ ವಿಚಿತ್ರ ಯಾಕೆಂದ್ರೆ ನಾವು ಇಷ್ಟ ಪಡೋರು ನಮ್ಗೆ ಸಿಗೋಲ್ಲ. ಸಿಕ್ಕಿದವರು ನಮ್ಗೆ ಇಷ್ಟ ಆಗಲ್ಲ. ಒಂದು ವೇಳೆ ಸಿಕ್ಕಿದ್ರು ಅದನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಅನ್ನೋದು ನಮ್ಗೆ ಗೊತ್ತಿರಲ್ಲ.


ಈಗ ಮನಸ್ಸು ತುಂಬಾ ಹಗುರ ಆಗ್ತಾ ಇದೆ. ನಂಗೊತ್ತು ಕಣೋ ಪ್ರೀತಿನ ಪ್ರೀತಿಯೊಂದ ಪ್ರೀತಿಸಿದ್ರೆ ಮಾತ್ರ ಸಿಗೋದು ಅಂತ. ಪ್ರೀತಿ ಅನ್ನೋದು ಎರಡು ಹೃದಯಗಳ ಮಧುರವಾದ ಮಿಲನ ಅಂತಾರೆ ಅಂತಹ ಪ್ರೀತಿನ ನಾನ್ ಬಯಸ್ತಾ ಇದೀನಿ. ನಿನ್ನ ಪ್ರೀತಿಗೆ ನನ್ನ ಹೃದಯ ಅನ್ನ್ನೋ ಗೋಪುರ ಯಾವತ್ತು ದೀಪ ಉರಿಸಿಕೋಡು ಕಾಯ್ತಾ ಇರುತ್ತೆ ಅದನ್ನ ಆರಿಸೋ ಪ್ರಯತ್ನ ಮಾಡಬೇಡ ಮತ್ತೆ ದೀಪಾನ ನನ್ನ ಹೃದಯದಲ್ಲಿ ಉರಿಸೋದು ತುಂಬಾ ಕಷ್ಟ ಕಣೋ. ನಾನು ಬಹಿರಂಗ ಪತ್ರ ಬರೆದಿದ್ದು ನನ್ನ ಪ್ರೀತಿನ ಆಳನ ಎಲ್ರಿಗೂ ತೋರಿಸಿಕೊಳ್ಳಬೇಕು ಅಂತಲ್ಲ. ಪತ್ರ ಬರೆದಿದ್ದರಿಂದ ನನ್ನ ಮನಸ್ಸಿಗೆ ಸ್ವಲ್ಪ ನೆಮ್ಮದಿ ಬಂತು, ಮನ್ಸು ತೊಬಾ ಪ್ರೀ ಆಗ್ತಾ ಇದೆ. ನನ್ನ ನೋವನ್ನ ಅರ್ಥ ಮಾಡ್ಕೋಳ್ಳೊಕೆ ಬಿಳಿ ಪರದೆಯ ಗೆಳತಿ ತೊಂಬಾ ಸಹಾಯಕ್ಕೆ ಒಂದ್ಲು. ನಿಜವಾಗ್ಲೂ ನೋವು ಅನ್ನೋದು ಗೊತ್ತಾಗಬೇಕಾದ್ರೆ ಪ್ರೀತಿ ಅನ್ನೋದು ಸಿಗಬೇಕು. ಪ್ರೀತಿಯಿಂದ ಮನಸ್ಸಲ್ಲಿ ಎಷ್ಟೇ ನೋವಿದ್ರೂ ಎನೋ ಸಂತೋಷ ಲಬಿಸುತ್ತದೆ. ಇಂತಹ ಸಂತೋಷ ಸಿಗುವ ಪ್ರೀತಿ ಎಲ್ಲರಿಗೂ ಸಿಗಲಿ ಈಗ ಎನ್ಮಾಡೋದು ಪ್ರೀತಿಗೆ ಬಿದ್ದಾಗಿದೆ ಜೇವಾನ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ ಎನ್ ಇಲ್ದೆ ಇದ್ರು ಆಶಾಭಾವನೆ ಇರ್ಲೇ ಬೇಕು ಅನ್ನೋದು ದೊಡ್ಡವರ ಮಾತು ಅಂತಹ ಆಶಾಭಾವನೆಯನ್ನು ನಾನು ಕೂಡ ಇಟ್ಕೊಂಡಿದ್ದೀನಿ. ಎಂಥ ಪರಿಸ್ಥಿತಿ ಬಂದ್ರು ನನ್ನ ನಂಬಿಕೆನ ಕೊನೆವರೆಗೂ ಹಾಳ್ ಮಾಡಬೇಡ ಪ್ಲೀಸ್ ಕಣೋ............!

                                                     
                                                       ಕೊನೆವರೆಗೂ ನಿನ್ನ ಪ್ರೀತಿಯ ನೀರಿಕ್ಷೆಯಲ್ಲಿರುವ
ಲಲಿತಾ

1 comment: