Friday, October 1, 2010

ಎಲ್ಲಿದ್ದರೂ ಹೇಗಿದ್ದರೂ ನೀ ನನ್ನ ಜೊತೆಯಲೆ ಬರುವೆ, ನೋವಿದ್ದರೂ ನಲಿವಿದ್ದರೂ ನೀ ನನ್ನ ಮನದಲೆ ಇರುವೆ

ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ
ತುಂಬಿಕೋ ನಿನ್ನಲಿ ಪ್ರೀತಿಯಾ ಚಿಪ್ಪಲಿ ಸ್ವಾತಿಯಾ ಮುತ್ತು ನಾ ಆಗುವೆ ನಿನ್ನಲಿ
ಕಣ್ಣ ರೆಪ್ಪೆಯಾ ಹಾಗೇನೆ ಕಾಪಾಡಿಕೋ ಪ್ರತಿ ಮಿಡಿತಕ್ಕು ನೀ ನನ್ನ ನೆನಪಿಟ್ಟುಕೋ
ಇಂದು ಎಂದೆಂದು ನೀ ನನ್ನ ಜೊತೆ ಸೇರಿಕೋ.....................

ಅಂಗೈಲಿ ದಿನ ನಿನ್ನ ಹೆಸರನು ನನ್ ಹೆಸರ ಜೊತೆ ನಾ ಬರದೆ
ಅಂಗೈಲಿ ಅದು ಅಳಿಸಿ ಹೋದರು ನನ್ ಎದೆಯೊಳಗೆ ನೀ ಇಳಿದೆ
ಓದೋಕೆ ದಿನ ಕುಳಿತು ಕೊಂಡರೆ ಪುಸ್ತಕದಲ್ಲು ನೀನೇನೆ
ದಾರೀಲು ನನಗ್ಯಾರು ಕಾಣರು ಕಂಡೆ ಎಲ್ಲೂ ನಿನ್ನನ್ನೆ

ನಿನ್ನಾ ನೋಡಲು........ಮಾತು ಆಡಲು
ನನ್ನಾ ಜೀವ ಕಾಯೋದು ಹಗಲೂ ಇರುಳೂ....

ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ
ತುಂಬಿಕೋ ನಿನ್ನಲಿ ಪ್ರೀತಿಯಾ ಚಿಪ್ಪಲಿ ಸ್ವಾತಿಯಾ ಮುತ್ತು ನಾ ಆಗುವೆ ನಿನ್ನಲಿ

ನಿನ್ನೆದೆಯ ತುಂಬು ಪ್ರೀತಿಯ ನೀ ಮುಚ್ಚಿ ಇಡಬೇಡ ಕಣೋ
ಮೌನವನು ಇನ್ನು ತಾಳೆನು ಬಾ ಹೇಳಿಬಿಡು ಎಲ್ಲವನು
ಸದ್ದೇ ಇಲ್ಲದೆ ಗೊತ್ತೇ ಆಗದೆ ಹುಟ್ಟಿ ಬಂದ ಪ್ರೀತಿ ಇದು
ನೀ ನಂಗೆ ಬಲು ಇಷ್ಟ ಎನ್ನಲು ನನ್ ಎದೆಯು ಕಾದಿಹುದು
ನೀನೆ ಹೇಳು ಬಾ....ನೀನೆ ಹೇಳು ಬಾ...ಹೇಗೆ
ಎಲ್ಲ ಹೇಳೋದು ನಾನು ನಿನಗೆ.......?

ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ
ತುಂಬಿಕೋ ನಿನ್ನಲಿ ಪ್ರೀತಿಯಾ ಚಿಪ್ಪಲಿ ಸ್ವಾತಿಯಾ ಮುತ್ತು ನಾ ಆಗುವೆ ನಿನ್ನಲಿ
ಕಣ್ಣ ರೆಪ್ಪೆಯಾ ಹಾಗೇನೆ ಕಾಪಾಡಿಕೋ ಪ್ರತಿ ಮಿಡಿತಕ್ಕು ನೀ ನನ್ನ ನೆನಪಿಟ್ಟುಕೋ
ಇಂದು ಎಂದೆಂದು ನೀ ನನ್ನ ಜೊತೆ ಸೇರಿಕೋ..................
                                                                   ಸೇರ್ತೀಯ ಅಲ್ವ.....?
 

No comments:

Post a Comment