Tuesday, September 28, 2010

ನೀ ಹೋದ ನನ್ನ ಮನದಲ್ಲಿ
ಉಳಿದಿತ್ತು ಖಾಲಿ ಕಲ್ಲಿನ ಮಂಟಪ
ದೇವರಿಲ್ಲದ ಗುಡಿಯಾಗಿ
ಕಡಿದು ಹೋದೆ ಪ್ರೀತಿಯ ತೋರಣ
ಒಲುಮೆಯೋ ಬದುಕಿನ ಹೂರಣ


ಅಳಲಾಗದ ಅಸಹಾಯಕತೆಗೆ
ನಾನು
ನಗಬೇಕಾಗಿತ್ತು
ನೋಯಲಾರದ
ವಿಧಿಗಾಗಿ
ನಾನು
ನಲಿಯಬೇಕಾಗಿತ್ತು ಕೇಳೆಯಾ

ಎಲ್ಲ ತುಂಬಿದೆ ಇಲ್ಲಿ
ಕೊರತೆಯಿಲ್ಲ ಸ್ನಾನಮಾನಾಭರಣಕೆ
ಸಾಟಿಯಾದಿತೇ ಎಲ್ಲವೂ
ಹೃದಯ ತುಂಬಿದ ನಿನ್ನ ಪ್ರೀತಿಗೆ ?

ಎಷ್ಟೋ ದಿನ ಪ್ರೀತಿಯ ಬೆಳಕು ನೀಡಿ
ನಂತರ ಗುಡಿಯ ಬರಿದು ಮಾಡಿ
ಹೋದೆ ನೀ ದೂರಕೆ
ದೂರ ದೂರಕೆ ಮತ್ತೆ ನನ್ನ ಬಾಳಲಿ ಬರಲಾರದಷ್ಟು ದೂರಕೆ


ಹೇಗಿರಲಿ ಅನುಸುತಿತ್ತು ನಿನ್ನ ಪ್ರೀತಿಸಿಗದ ಈ ಭುವಿಯಲಿ
ಉರಿದಿದೆ ಜ್ವಾಲಾಗ್ನಿ ಮನದಲಿ
ಆದರೂ ಆ ದಿನ
ನೋವೆಲ್ಲಾ ನನ್ನಲ್ಲಿಟ್ಟುಕೊಂಡು

ತುಂಬು ಮನಸ್ಸಿನಿಂದ ನಿನ್ನ ಭವಿಷ್ಯಕ್ಕೆ ಹಾರೈಸಿದ್ದೆ

No comments:

Post a Comment