Tuesday, September 28, 2010

ನಿನ್ನದೇ ನೆನಪು

ನಿನ್ನದೇ ನೆನಪು ನಿನ್ನದೇ ಕನಸು
ನಿನ್ನದೇ ಬಿಂಬ ಕಣ್ಣ ತುಂಬಾ

ನೀ ಛಿದ್ರ ಮಾಡಿ ಹೋದ ಮನವೆಂಬ ಕನ್ನಡಿಯಲ್ಲಿ
ಎಲ್ಲಿ ನೋಡಿದರು ನಿನ್ನದೇ ಬಿಂಬ

ಎಷ್ಟು ಚಿಂತಿಸದರೇನು ಬಂತು
ಬರುವವನಲ್ಲ ನೀ ಮತ್ತೆ ತಿರುಗಿ ನನ್ನ ಬಾಳಲಿ

ನಿಜವ ಒಪ್ಪಲಾರದ ಮನವಾಯ್ತು ಕಲ್ಲು
ನಿನ್ನದೇ ನೆನಪಲ್ಲಿ ಮರುಗಿ

ಕಲ್ಲು ಬಂಡೆಯಾಗಿರುವ ಮನಕೆ ಬೇಕಿರುವುದು ಕೇವಲ ನಿನ್ನ ಸಹಾನುಭೂತಿಯಲ್ಲ
ಮತ್ತೇನೂ ಕೇಳಲಾರೆ ಒಂದೇ ಒಂದನು ಕೇಳುವೆ

ನಿನ್ನ ಮುದ್ದಾದ ಮನಸ್ಸಿನ ಪ್ರೀತಿ ನನ್ನ ಮೇಲಿರಲಿ ಕೊನೆವರೆಗೂ................ !

No comments:

Post a Comment