Saturday, October 16, 2010

ಜೊತೆಗಿರುವುದು ಆ ನೆನಪುಗಳು ಸದಾ...

ನಿನಿಲ್ಲದಾಗ ನನ್ನಲ್ಲಿ ಉಳಿದಿದ್ದು ನಿನ್ನನೆನಪುಗಳು ಮಾತ್ರ
ನೆನಪುಗಳಿಂದ ಹೇಗೋ, ಒಂಟಿಯಂತೂ ಅಲ್ಲ ನಾನು
ಆದರೂ ಒಂಥರ ಚಂದ್ರನಿಲ್ಲದ ಬಾನು
ಚಂದ್ರ ಮತ್ತೆ ಕಾಣುವನೋ ಇಲ್ಲವೋ
ಎಣಿಸಲಾರದಷ್ಟು ನೆನಪುಗಳ
ಚುಕ್ಕೀಯಂತೂ ಸದಾ ಮನಸಲ್ಲಿ ಹೊಳೆಯುವುದು!!

ಈ ನೆನಪುಗಳು…
ಸಿಹಿಯಾದಲ್ಲಿ ತುಟಿ ಅಂಚಲಿ ನಗೆಯಾಗಿ ಚಿಮ್ಮೂವುದು !
ಕಹಿಯಾದಲ್ಲಿ ಕಣ್ಣಂಚಲಿ ಹನಿಯಾಗಿ ಹರಿವುದು !
ನಿಜವಾಗದ ಕನಸಾದಲ್ಲಿ ಬಾನಂಚಲಿ ತಾರೆಯಾಗಿ ಮಿಂಚುವುದು!

ಸಿಹಿಯೋ ಕಹಿಯೋ
ಕೊಟ್ಟಿರುವನು ನೆನಪುಗಳ
ಪುನಹ ಬರುವಾನೋ ಇಲ್ಲವೋ
ಜೊತೆಗಿರುವುದು ಆ ನೆನಪುಗಳು ಸದಾ...

1 comment:

  1. ಈ ನೆನಪುಗಳು ಹಾಗೆಯೇ.. ಒರತೆ ನಿಲ್ಲದ ಝರಿಯಂತೆ... ಹರಿಯುತ್ತಾ ಇರುತ್ತೆ .... ಚೆನ್ನಾಗಿದೆ ನಿಮ್ಮ ಕವನ ..
    http://nenapinasanchi.wordpress.com/

    ReplyDelete