Wednesday, October 13, 2010

ನೆನೆದು ನೆನೆದು ನೊಂದೆ ದೂರ ಸರಿದು ಹೋದೆ ನಿನ್ನ ನೆನಪಿನಲ್ಲೇ ಬಾಳುವೆ


ನಾ ನನ್ನಾಣೆಗು ಮರೆಯೊಲ್ಲ ನಿನ್ನೀ ಪ್ರೀತಿಯ
ನೀ ಜೊತೆ ಇದ್ದರೆ ಬೇಕಿಲ್ಲ ಬೇರೆ ಪರಿಚಯ
ರೆಪ್ಪೆಯ ಒಳಗಿನ ಕಣ್ಣುಗಳು ಹೇಳೋ ಮಾತಿಗೆ

ರೆಕ್ಕೆಯ ಬಿಚ್ಚುವ ಆತುರವೆ ಅನುರಾಗವೆ
ನಿ೦ತರು ನಿಲ್ಲದ ಆಸೆಗಳು ಕೊಲ್ಲೋ ರೀತಿಗೆ
ಅರಿಯದೆ ಸೋತು ಜಾರುವುದೆ ಅನುಬ೦ಧವೆ
ಮನಸಿನ ಮನೆಯಲಿ ತೆರೆದಿದೆ ಕದ
ಒಲವಿನ ಹೆಸರಲಿ ಬರೆದಿದೆ ಪದ
ಹುಡುಕುವ ಮನಸಿಗೆ ಬೇಲಿ ನ್ಯಾಯವೇ...


ಪ್ರೀತಿಯೆ ನಿನ್ನ ಪರಿಚಯವೆ ತಪ್ಪು ಎ೦ದರೆ

ನಗುವಿನ ನಾಳೆಯ ನ೦ಬಿಕೆಯ ಮಾತೆಲ್ಲಿದೆ
ನಿನ್ನನು ನೆಚ್ಚಿದ ಹೃದಯಗಳು ಕಣ್ಣೀರಿಡುತಿದೆ
ಕನಿಕರವಿಲ್ಲದೆ ಎಲ್ಲಿರುವೆ ಕಾಪಾಡದೆ
ತುಟಿಗಳ ಅ೦ಚಲಿ ಕಾಣುವ ನಗು
ಮರೆಮಾಚದಿರು ನನ್ನಾಣೆಗು
ಪ್ರೇಮಿಗಳೆ೦ದರೆ ಅಯ್ಯೋ ಎನಿಸದೇ..


ಪ್ರೀತಿ ಎ೦ದರೆ ಏನರ್ಥ ನೀನೇ ಕಲಿಸಿದೆ
ಎಲ್ಲಾ ತಿಳಿದರು ಗೊತ್ತಿಲ್ಲದ೦ತೆ ನಟಿಸಿದೆ
ಕರುಣೆಯು ಇಲ್ಲ ಕ೦ಪನ ಇಲ್ಲ ಏನಿದು ಅರ್ಥವೆ
ಮಾತಿಗು ಸಿಗದೆ ಮನಸಿಗು ಸಿಗದೆ ಏನಿದು ಸ್ವಾರ್ಥವೆ
ಪ್ರಣಯದ ಹೆಸರಿದೆ ಪ್ರಳಯದ ಗುಣವಿದೆ
ಸ್ನೇಹವೋ ಪ್ರೇಮವೋ...

ನಾ ನನ್ನಾಣೆಗು ಮರೆಯೊಲ್ಲ ನಿನ್ನೀ ಪ್ರೀತಿಯ
ನೀ ಜೊತೆ ಇದ್ದರೆ ಬೇಕಿಲ್ಲ ಬೇರೆ ಪರಿಚಯ
ಯಾವುದು ಕನಸು ಯಾವುದು ಮನಸು ಹೇಳು ಬಾ ಹೃದಯವೆ

No comments:

Post a Comment